ಪ್ರವಚನದಿಂದ ಮನಸ್ಸು ಶುದ್ದಿಯಾಗುತ್ತದೆ: ಹುಕ್ಕೇರಿ ಶ್ರೀಗಳು

ವಾಡಿ: ಜ.17: ಶರಣ-ಸಂತರ ಜೀವನ ಚರಿತ್ರೆ ಒಳಗೊಂಡ ಪ್ರವಚನಗಳು ಜೀವನವನ್ನು ಮೌಲ್ಯಯುತವಾಗಿ, ಆದರ್ಶವಾಗಿ ನಡೆಸಲು ಸಹಾಯಕವಾಗುತ್ತವೆ. ಮನಸ್ಸನ್ನು ಶುದ್ದವಾಗಿ, ಶಾಂತವಾಗಿ ಇರಬೇಕಾದರೆ ಪ್ರವಚನ ಆಲಿಸುವುಕೆ ಮತ್ತು ಅನುಸರಿಸುವುಕೆ ಅಗತ್ಯವೆಂದು ಹಾವೇರಿ ಹುಕ್ಕೇರಿ ಮಠದ ಪೂಜ್ಯ ಸದಾಶಿವ ಮಹಾಸ್ವಾಮಿಗಳು ಹೇಳಿದರು.

ಪಟ್ಟಣ ಸಮೀಪದ ರಾವೂರ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಸಿದ್ಧಲಿಂಗ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರರ ಪುರಾಣ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಡಿದರು. ಮಠಗಳು ಎಲ್ಲರಲ್ಲಿ ಸಮಾನತೆಯನ್ನು ಬಿತ್ತುವ ಕೆಲಸ ಮಾಡುತ್ತವೆ. ಇಂದು ನಮಗೆಲ್ಲಾ ಹಣ, ಸಂಪತ್ತು, ಸ್ಥಾನಮಾನ, ಗೌರವ ಎಲ್ಲಾ ಸಿಗುತ್ತಿವೆ. ಆದರೆ ಮುಖ್ಯವಾಗಿ ಸಮಾದಾನ ಸಿಗುತ್ತಿಲ್ಲ. ಜೀವನದಲ್ಲಿ ಏನಿದ್ದರೇನು ಫಲ. ಸಮಾಧಾನ, ಮನಸ್ಸಿಗೆ ಶಾಂತಿ ಇಲ್ಲದಿದ್ದರೆ. ಆದರಿಂದ ಶಾಂತಿ ಸಮಾಧಾನಗಳನ್ನು ಇನ್ನೇಲ್ಲೋ ಹುಡುಕಬೇಕಿಲ್ಲ . ಎಲ್ಲವೂ ನಮ್ಮೋಳಗೆ ಇದೆ. ಒಂದಷ್ಟು ಸತ್ಸಂಗ, ಸದ್ವಿಚಾರಗಳನ್ನು ನಿತ್ಯವೂ ಅರಿತರೆ ಖಂಡಿತ ಮನಕ್ಕೆ ಶಾಂತಿ ಲಭಿಸುವುದು ಎಂದರು.

ಇಪ್ಪತ್ತೊಂದು ದಿನ ಪ್ರವಚನ ಸೇವೆ ಮಾಡುತ್ತಿರುವ ಅನ್ನದಾನಿ ಸ್ವಾಮಿಗಳು ಮಾತನಾಡುತ್ತಾ, ರಾವೂರ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠ ಈ ಭಾಗದಲ್ಲಿ ವೈಚಾರಿಕ ಚಿಂತನೆಗಳನ್ನು ಜನರಲ್ಲಿ ಬಿತ್ತು ಕೆಲಸ ಮಾಡುತ್ತಿದೆ. ಹಿಂದಿನ ಲಿಂ.ಸಿದ್ಧಲಿಂಗ ಸ್ವಾಮಿಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಇಂದು ಸಾವಿರಾರು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿದೆ. ಸಾಹಿತ್ಯಿಕವಾಗಿ, ಸಾಂಸ್ಕøತಿಕವಾಗಿ ವಿಭಿನ್ನ ಕಾಂiÀರ್iಕ್ರಮಗಳನ್ನು ರೂಪಿಸಿ ಈ ಭಾಗದ ಕಲಾವಿದರಿಗೆ, ಸಾಹಿತಿಗಳಿಗೆ ವೇದಿಕೆಯನ್ನು ನೀಡಿ ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು. ಯಡಿಯೂರು ಶ್ರೀ ಸಿದ್ಧಲಿಂಗೇಶ್ವರರ ಪುರಾಣವನ್ನು ಆಲಿಸುವುದರ ಮೂಲಕ ಭಕ್ತರು ತಮ್ಮ ವರ್ತನೆಗಳಲ್ಲಿ ಪರಿವರ್ತನೆ ತಂದು ಕೊಳ್ಳಬೇಕೆಂದು ಹೇಳಿದರು.
ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಮೊದಲನೆ ಬ್ಯಾಚಿನ ಹಿರಿಯ ವಿಧ್ಯಾರ್ಥಿಗಳೆಲ್ಲಾ ಸೇರಿಕೊಂಡು ನಾಣ್ಯಗಳ ತುಲಾಭಾರ ಸೇವೆ ನಡೆಸಿಕೊಟ್ಟರು. ಅದೇ ರೀತಿ ಒಂದು ದಿನದ ದಾಸೋಹ ಸೇವೆ ಮಾಡಿ ಮೆಚ್ಚುಗೆ ಗಳಿಸಿದರು. ಪೂಜ್ಯ ಸಿದ್ಧಲಿಂಗ ದೇವರು ಎಲ್ಲರನ್ನು ಸತ್ಕರಿಸಿದರು.

ವೇದಿಕೆಯ ಮೇಲೆ ಶ್ರೀಮಠದ ಉತ್ತರಾಧಿಕಾರಿ ಸಿದ್ಧಲಿಂಗ ದೇವರು, ದೇವನತೆಗನೂರಿನ ಚಂದ್ರಶೇಖರ ದೇವರು, ಓಂಗುರೂಜಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಗುಂಡಣ್ಣ ಬಾಳಿ, ಶಿವಲಿಂಗಪ್ಪ ವಾಡೇದ, ಅಣ್ಣಾರಾವ ಬಾಳಿ, ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ, ಸೂರ್ಯಕಾಂತ ಕಾಳೇಕರ, ಭೀಮಾಶಂಕರ ಖೇಣಿ, ಮಾಣಿಕ ಗೊಳಾ, ರುದ್ರಗೌಡ ಪಾಟೀಲ, ರವಿಕುಮಾರ ಅಲ್ಲಮಶೆಟ್ಟಿ, ಸಂಗಣ್ಣ ಇಜೇರಿ, ಭೀಮಾಶಂಕರ ಇಂದೂರ, ಈಶ್ವರ ಬಾಳಿ, ಅಬ್ದುಲ ಸಲೀಂ ಪ್ಯಾರೇ, ಮಲ್ಲಿಕಾರ್ಜುನ ಸೇಡಂ, ಸಿದ್ಧಲಿಂಗ ಬಾಳಿ, ಶರಣು ಜ್ಯೋತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.