ಪ್ರವಚನಕಾರರ ಸನ್ಮಾನ


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.26 ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಕಳೆದ 15 ದಿನಗಳಿಂದ ನಡೆದ ಪವಾಡ ಪುರುಷ ಶ್ರೀ ಗಾದಿಲಿಂಗಪ್ಪ ತಾತಾ ನವರ ಜೀವನ ಚರಿತ್ರೆಯನ್ನು ಪುರಾಣ, ಪ್ರವಚನದ ಮೂಲಕ* ಕಪ್ಪಗಲ್ಲು ಗ್ರಾಮದ ಜನತೆಗೆ  ಮತ್ತು ಶ್ರೀ ಶಿವ ಶರಣ ಗಾದಿಲಿಂಗಪ್ಪ ತಾತಾ ನವರ ಭಕ್ತಾದಿಗಳಿಗೆ ಪ್ರವಚನ ಮಾಡಿದ ಪುಟ್ಟ ರಾಜ್ ಗವಾಯಿಗಳ ಶಿಷ್ಯರಿಗೆ ನಿನ್ನೆ ಮಹಾ ಮಂಗಳ ಕಾರ್ಯಕ್ರಮದಲ್ಲಿ ಕಪ್ಪಗಲ್ಲು ಗ್ರಾಮ ಪಂಚಾಯಿತಿ ಸದಸ್ಯ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಬಳ್ಳಾರಿ ತಾಲೂಕು ಘಟಕದ ಅಧ್ಯಕ್ಷ ರಾದ ಅರಿಕೇರಿ ಸದಾಶಿವಪ್ಪ ಪ್ರವಚನಕಾರರನ್ನು  ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು, ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರುಗಳು, ರೈತಾಬಾಂಧವರು, ಮಹಿಳೆಯರು, ಮಕ್ಕಳು, ಶ್ರೀ ಶಿವ ಶರಣ ಗಾದಿಲಿಂಗಪ್ಪ ತಾತಾ ನವರ ಭಕ್ತಾದಿಗಳು,ಭಾಗವಹಿಸಿದ್ದರು.