ಪ್ರಯೋಗಶೀಲತೆ ಮಹಿಳೆಗೆ ಅತೀಅವಶ


ಧಾರವಾಡ,ಮಾ.24: ಮಹಿಳೆಯರು ಚಿಂತನಶೀಲರಾಗಬೇಕು. ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಕ.ವಿ.ವ. ಸಂಘದಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವುಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ಸ್ತ್ರೀ'ಕುರಿತುಜಾನಪದ ಸಮೂಹ ಗಾಯನ’ ಮತ್ತು ಸ್ವರಚಿತ ಕವನ ವಾಚನ' ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದಅವರು, ಮಹಿಳೆಯರು ಎಂಥದೇ ಸಮಸ್ಯೆಗಳು ಬಂದರೂಅದರಾಚೆ ಬಂದು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸನ್ನದ್ಧರಾಗಬೇಕುಎಂದರು. ಮಹಿಳಾ ದಿನಾಚರಣೆ ಅಂಗವಾಗಿಸ್ತ್ರೀ’ ಕುರಿತು ಮಹಿಳೆಯರಿಗಾಗಿ ಜಾನಪದ ಸಮೂಹ ಗಾಯನ ಸ್ಪರ್ಧೆ ಮತ್ತು ಸ್ವರಚಿತ ಕವನ ವಾಚನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಈ ಎರಡೂ ಸ್ಪರ್ಧೆಗಳಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆತಂದರು.
ಸಮೂಹ ಗಾಯನ ಸ್ಪರ್ಧೆಯಲ್ಲಿ ಸಿಂಗಾರ ಸಖಿ' ಮಹಿಳಾ ಮಂಡಳ,ಕಲ್ಪತರು’ ಮಹಿಳಾ ಮಂಡಳ, ಶ್ರೀರಂಜಿನಿ' ಮಹಿಳಾ ಮಂಡಳ,ಆಂಜನೇಯ’ ಮಹಿಳಾ ಮಂಡಳ, ಕಸ್ತೂರಿಕುಂದರಗಿ ಹಾಗೂ ಸಂಗಡಿಗರು ಮತ್ತು ಸ್ವರಚಿತ ಕವನ ವಾಚನ ಸ್ಪರ್ಧೆಯಲ್ಲಿಗಾಯತ್ರಿಕಮ್ಮಾರ, ಶಶಿರೇಖಾ ಚಕ್ರಸಾಲಿ, ಜಯಶ್ರೀ ಮಂಗಳೂರು, ಎಸ್.ಎಮ್.ಬಳ್ಳಾರಿ, ಶ್ರೀದೇವಿ ದೇಶಪಾಂಡೆ ಬಹುಮಾನ ಪಡೆದರು. ವಿಜೇತರಿಗೆ ಮಕ್ಕಳ ಕವಿ ನಿಂಗಣ್ಣಕುಂಟಿ ಬಹುಮಾನ ವಿತರಿಸಿ, ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದುವರೆಯಬೇಕೆಂದು ಶುಭ ಹಾರೈಸಿದರು.
ನಿರ್ಣಾಯಕರ ಪರವಾಗಿ ಸಂಘದಕಾರ್ಯಕಾರಿ ಸಮಿತಿ ಸದಸ್ಯಡಾ.ಧನವಂತ ಹಾಜವಗೋಳ ಮಾತನಾಡಿದರು. ಡಾ. ನಿರ್ಮಲಾಚಿಗಟೇರಿ ಮತ್ತು ಪ್ರಮೀಳಾ ಜಕ್ಕಣ್ಣವರ ಹಾಡನ್ನು ಹಾಡಿ, ತಮ್ಮಅಭಿಪ್ರಾಯ ವ್ಯಕ್ತಪಡಿಸಿದರು.
ವೃಂದಾ ಮತ್ತು ಸಂಗಡಿಗರು ಪ್ರಾರ್ಥಿಸಿದರು.ಮಹಿಳಾ ಮಂಟಪದ ಸಂಚಾಲಕಿ ಡಾ.ಶೈಲಜಾತ.ಅಮರಶೆಟ್ಟಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ವಿ. ಶಾರದಾ ನಿರೂಪಿಸಿದರು.ಬಹುಮಾನ ವಿತರಣಾಕಾರ್ಯಕ್ರಮ ನಡೆಸಿಕೊಟ್ಟರು.ಸುಜಾತಾ ಹಡಗಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಜ್ಯೋತಿ ಭಾವಿಕಟ್ಟಿ, ಗಂಗವ್ವಕೋಟಿಗೌಡರ, ಶಾರದಾ ಕೌದಿ, ರೇಖಾಅಂತಕ್ಕನವರ ಸ್ಪರ್ಧೆ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿಡಾ.ಶ್ರೀಶೈಲ ಹುದ್ದಾರ, ಮಹಾಂತೇಶ ನರೆಗಲ್ಲ, ಬೆಟಗೇರಿ, ಪಾರ್ವತಿ ಹಾಲಭಾವಿ, ಕಲ್ಯಾಣಶೆಟ್ಟಿ, ಗೀತಾ ಕುಂಬಿ ಮುಂತಾದವರು ಉಪಸ್ಥಿತರಿದ್ದರು.