ಪ್ರಯಾಣ ಸುರಕ್ಷತಾ ಅರಿವು ಮೂಡಿಸಿದ ಪಿಎಸ್ ಐ ರಾಠೋಡ

ಕೆಂಭಾವಿ:ಫೆ.13:ಸೋಮವಾರ ಬೆಳಿಗ್ಗೆ ಕೂಲಿ ಕಾರ್ಮಿಕರನ್ನು ಹೊತ್ತೊಯುತ್ತಿದ್ದ ಪಿಕ್‍ಅಪ್ ವಾಹನಗಳನ್ನು ತಡೆದು ಅದರಲ್ಲಿ ಸಂಚರಿಸುತ್ತಿದ್ದ ಕೂಲಿ ಕಾರ್ಮಿಕರಿಗೆ ಹಾಗೂ ವಾಹನದ ಚಾಲಕರಿಗೆ ಪಿಎಸ್‍ಐ ರಾಜಶೇಖರ ರಾಠೋಡ ಕಾನೂನಿನ ಅರಿವು ಮೂಡಿಸುವ ಕಾರ್ಯದ ಜೊತೆಗೆ ವಾಹನಗಳಿಗೆ ದಂಡ ವಿಧಿಸಿದರು.
ಗೂಡ್ಸ್ ವಾಹನಗಳಲ್ಲಿ ಸಂಚರಿಸದಂತೆ ಕಾರ್ಮಿಕರಿಗೆ ತಿಳಿ ಹೇಳಿದ ಅವರು ಜನರನ್ನು ತೆಗೆದುಕೊಂಡು ಹೋಗುವ ಕ್ರೂಸರ್‍ನಲ್ಲಿ ಮಾತ್ರ ಹೋಗಬೇಕು, ಗೂಡ್ಸ್ ಗಾಡಿಗಳಲ್ಲಿ ತೆರಳಬಾರದು. ಚಿಕ್ಕ ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಬಾರದು. ಮಕ್ಕಳಿಗೆ ಶಾಲೆಗೆ ಕಳುಹಿಸಬೇಕು ಎಂದು ತಿಳಿ ಹೇಳಿದರು.
ಗೂಡ್ಸ್ ವಾಹನಗಳಿಗೆ ದಂಡ ವಿಧಿಸಿದ ಅವರು ಮುಂದೆ ಈ ರೀತಿ ಜನರನ್ನು ಕರೆದುಕೊಂಡು ಹೋಗದಂತೆ ಖಡಕ್ ವಾನಿರ್ಂಗ್ ನೀಡಿದರು. ವಾಹನಗಳ ಮಾಲೀಕರು ಸಹ ಲೈಸನ್ಸ್ ಹೊಂದಿರುವ ಚಾಲಕರಿಗೆ ಮಾತ್ರ ಗಾಡಿಯನ್ನು ಓಡಿಸಲು ಅನುಮತಿಸಬೇಕು, ವಾಹನದ ವಿಮೆಯನ್ನು ಸರಿಯಾಗಿ ಮಾಡಿಸಿರಬೇಕು. ಇಲ್ಲದಿದ್ದರೆ ಹೆಚ್ಚಿನ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಲ್ಲ ಗೂಡ್ಸ್ ವಾಹನಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ ಸಾಕಷ್ಟು ದಂಡವನ್ನು ಸಹ ವಿಧಿಸಲಾಯಿತು. ಈ ಸಂದರ್ಭದಲ್ಲಿ ಎಎಸ್‍ಐ ಬಲರಾಮ, ಪೆÇಲೀಸ್ ಸಿಬ್ಬಂದಿ ಆನಂದ ಸೇರಿದಂತೆ ಇತರರಿದ್ದರು.