ಪ್ರಯಾಣಿಕರ ಸೋಗಿನಲ್ಲಿ ಕ್ಯಾಬ್ ಬುಕ್ ಮಾಡಿ ಸುಲಿಗೆ: ನಾಲ್ವರು ದರೋಡೆಕೋರರ ಸೆರೆ

ಬೆಂಗಳೂರು,ನ.18-ಕಳವು ಮಾಡಿದ ಮೊಬೈಲ್​​ನಿಂದ ಪ್ರಯಾಣಿಕರ ಸೋಗಿನಲ್ಲಿ ಕ್ಯಾಬ್ ಬುಕ್ ಮಾಡಿ, ತಮ್ಮ ಜಾಗಕ್ಕೆ‌ ಕರೆಸಿಕೊಂಡು‌ ಚಾಲಕನಿಗೆ ಡ್ರ್ಯಾಗರ್ ತೋರಿಸಿ ದರೋಡೆ ಮಾಡುತ್ತಿದ್ದ ನಾಲ್ವರು ದರೋಡೆಕೋರರನ್ನು ಆರ್​​​ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಅಭಿಷೇಕ್, ರೋಹಿತ್, ಅಜಯ್ ಹಾಗೂ ಮಣಿಕಂಠ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರೆಲ್ಲರೂ ಸ್ನೇಹಿತರಾಗಿದ್ದು, ಸುಲಭವಾಗಿ ಹಣ ಸಂಪಾದಿಸಲು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು.
ರಾತ್ರಿ ವೇಳೆ‌ ಸಂಚರಿಸುವ ಕ್ಯಾಬ್ ಚಾಲಕರನ್ನು ಗುರಿಯಾಗಿಸಿಕೊಂಡಿದ್ದ ಈ ನಾಲ್ವರು, ಪೊಲೀಸರಿಗೆ ಅನುಮಾನ ಬಾರದಿರಲು ಮೊಬೈಲ್​ಗಳನ್ನು ಕದ್ದು ಅದರಿಂದ ಕ್ಯಾಬ್​​ ಬುಕ್​ ಮಾಡಿ ದರೋಡೆ ಮಾಡುತ್ತಿದ್ದರು.
ಇದೇ ತಿಂಗಳು 4ರಂದು ಈ ಗ್ಯಾಂಗ್​​ ಆನ್​​ಲೈನ್ ಮೂಲಕ ಓಲಾ ಕ್ಯಾಬ್​​ವೊಂದನ್ನ ಬುಕ್ ಮಾಡಿದ್ದರು. ಇದರಂತೆ ಕ್ಯಾಬ್ ಚಾಲಕ ಪ್ರವೀಣ್ ಎಂಬಾತ ಪಿಕ್ ಅಪ್ ಪಾಯಿಂಟ್ ಆದ ಎಂಎಸ್ ಪಾಳ್ಯಗೆ ಬಂದು ನಾಲ್ವರನ್ನು‌ ಪಿಕ್ ಅಪ್ ಮಾಡಿಕೊಂಡಿದ್ದಾರೆ‌.‌ ಮಾರ್ಗ ಮಧ್ಯೆ ಸಿಂಗಾಪುರ ಲೇಔಟ್ ಹೋಗಬೇಕೆಂದು ಹೇಳಿ ನಿರ್ಜನ ಪ್ರದೇಶದ ಬಳಿ ಕಾರು ನಿಲ್ಲಿಸುವಂತೆ ಆರೋಪಿಗಳು ತಾಕೀತು‌ ಮಾಡಿದ್ದಾರೆ.
ಬಳಿಕ ಚಾಲಕನಿಗೆ ಡ್ರ್ಯಾಗರ್ ತೋರಿಸಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಜೇಬಿನಲ್ಲಿದ್ದ 2,500ರೂ ಹಾಗೂ ಕಾರಿನಲ್ಲಿದ್ದ ಮೊಬೈಲ್ ಪೋನ್, ಎರಡು ಎಟಿಎಂ ಕಾರ್ಡ್​ಗಳನ್ನು ಕಸಿದುಕೊಂಡ ಖದೀಮರು, ಚಾಲಕನನ್ನು ಕಾರಿನ‌ ಮಧ್ಯದ ಸೀಟಿನಲ್ಲಿ ಕೂರಿಸಿಕೊಂಡು ರಾತ್ರಿಯಿಡಿ ಕಾರಿನಲ್ಲಿ‌ ಸುತ್ತಾಡಿದ್ದಾರೆ.
ಇದಲ್ಲದೆ ಎಟಿಂಎಂ ಪಾಸ್ ವರ್ಡ್ ಪಡೆದು 13,900 ರೂಪಾಯಿ ಡ್ರಾ ಮಾಡಿಕೊಂಡಿದ್ದಾರೆ. ನನಗೆ ಆ್ಯಕ್ಸಿಡೆಂಟ್ ಆಗಿದೆ ಎಂದು ಹೇಳಿ ಯಾರಿಗಾದರೂ ಪೋನ್ ಮಾಡಿ ಆನ್​​ಲೈನ್ ಮೂಲಕ 50 ಸಾವಿರ ಹಾಕಿಸಿಕೊಳ್ಳುವಂತೆ ಚಾಲಕ ಪ್ರವೀಣ್ ಗೆ ದರೋಡೆಕೋರರು ಒತ್ತಡ ಹಾಕಿದ್ದಾರೆ.
ಜೀವ ಭಯದಿಂದಾಗಿ ಪ್ರವೀಣ್​​ ತನ್ನ ಸ್ನೇಹಿತನಿಗೆ ಕರೆ ಮಾಡಿ15 ಸಾವಿರ ರೂಪಾಯಿ ಹಾಕಿಸಿಕೊಂಡಿದ್ದಾನೆ. ಈ ಹಣವನ್ನು ಪಡೆದ ಈ ನಾಲ್ವರು ಖದೀಮರು, ಈ ವಿಷಯ ಎಲ್ಲಿಯೂ ಬಾಯಿ ಬಿಡದಂತೆ ಬೆದರಿಕೆ ಹಾಕಿ ಸ್ಥಳದಿಂದ ಕಾಲ್ಕಿತ್ತಿದ್ದಾರ