ಪ್ರಯಾಣಿಕರಿಗೆ ಮತದಾನ ಜಾಗೃತಿ


ಬಾಗಲಕೋಟೆ, ಏ.18: ಜಿಲ್ಲೆಯಲ್ಲಿಅತೀ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡುವ ನಿಟ್ಟಿನಲ್ಲಿ ನವನಗರದ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್‍ಗಳನ್ನು ಏರಿ ಪ್ರಯಾಣಿಕರಿಗೆಕರ ಪತ್ರ ಹಂಚುವ ಮೂಲಕ ಮತದಾನಜಾಗೃತಿ ಮೂಡಿಸಲುಜಿಲ್ಲಾ ಸ್ವೀಪ್ ಸಮಿತಿಯಅಧ್ಯಕ್ಷರುಆದಜಿ.ಪಂ ಸಿಇಓ ಶಶಿಧರ ಕುರೇರ ಮುಂದಾದರು.
ಜಿಲ್ಲಾ ಸ್ವೀಪ್ ಸಮಿತಿಯು ಈ ಬಾರಿ ಲೋಕಸಭಾಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಮತದಾನದಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ನವನಗರದ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಮತದಾನ ಮಹತ್ವ ಸಾರಲುಎಲ್‍ಇಡಿ ಪರದೆಯ ಮೂಲಕ ಮತದಾನಜಾಗೃತಿ ಗೀತೆಗಳ ವಿಡಿಯೋ ಪ್ರಸಾರಕ್ಕೆ ಚಾಲನೆ ನೀಡಿ ನಂತರ ಬಸ್ ನಿಲ್ದಾಣದಲ್ಲಿದ್ದಯುವಕರ, ಯುವತಿಯರಿಗೆ, ಹಿರಿಯ ನಾಗರಿಕರಿಗೆ ಹಾಗೂ ಇತರೆಅರ್ಹ ಮಹತದಾರರಿಗೆಜಾಗೃತಿಯಕರ ಪತ್ರಗಳನ್ನು ಹಂಚಿದರು.
ಅಲ್ಲದೇ ಬಸ್ ನಿಲ್ದಾಣಕ್ಕೆ ಬರುವ ಬಸ್‍ಗಳನ್ನು ಏರಿ ಬಸ್‍ನಲ್ಲಿರುವ ಪ್ರಯಾಣಿಕರಿಗೆ ಮತದಾನಜಾಗೃತಿಯಕರ ಪತ್ರಗಳನ್ನು ಹಂಚುವ ಮೂಲಕ ಪ್ರತಿಯೊಬ್ಬ ಮತದಾರರು ಬರುವ ಮೇ 7 ರಂದುತಪ್ಪದೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನುಚಲಾಯಿಸುವಂತೆ ತಿಳಿಸಿದರು. ಮತದಾನದಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕು. ತಾವು ಮತದಾನಚಲಾಯಿಸುವದರಜೊತೆಗೆ ಮತದಾನದ ಮಹತ್ವವನ್ನುಜನಸಾಮಾನ್ಯರಿಗೆ ತಿಳಿಯಪಡಿಸಬೇಕು ಎಂದರು.
ನಂತರ ಬಸ್ ನಿಲ್ದಾಣದಲ್ಲಿ ನೆರೆದ ಪ್ರಯಾಣಿಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಪಂಚಾಯತ ಮುಖ್ಯಯೋಜನಾ ನಿರ್ದೇಶಕ ಪುನಿತ್, ಯೋಜನಾ ನಿರ್ದೇಶಕ ಶಶಿಕಾಂತ ಶಿವಪುರೆ, ನಗರಸಭೆ ಪೌರಾಯುಕ್ತ ವಾಸಣ್ಣಆರ್, ವಾಯವ್ಯಕರ್ನಾಟಕರಸ್ತೆ ಸಾರಿಗೆ ಸಂಸ್ಥೆಯಜಿಲ್ಲಾ ಸಂಚಾರಿಅಧಿಕಾರಿ ಪಿ.ವಿ.ಮೈತ್ರಿ, ಬಾಗಲಕೋಟೆಘಟಕ ವ್ಯವಸ್ಥಾಪಕಎ.ಎ.ಕೋರಿ ಸೇರಿದಂತೆಇತರರುಉಪಸ್ಥಿತರಿದ್ದರು