ಪ್ರಯಾಣಿಕರಿಗೆ ಏರ್ ಇಂಡಿಯಾ ಕೊಡುಗೆ

ನವದೆಹಲಿ,ಅ.೧೮-ದೇಶೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಮುಂದಿನ ೯೬ ಗಂಟೆಗಳ ಕೊಡುಗೆಯ ಭಾಗವಾಗಿ, ಸಂಸ್ಥೆಯು ಯಾವುದೇ ಇತರ ಸೌಲಭ್ಯ ಶುಲ್ಕವಿಲ್ಲದೆ ಆರಂಭಿಕ ಟಿಕೆಟ್ ದರವನ್ನು ರೂ.೧,೪೭೦ ಕ್ಕೆ ನಿಗದಿಪಡಿಸಿದೆ. ಬಿಸಿನೆಸ್ ಕ್ಲಾಸ್ ಟಿಕೆಟ್ ಅನ್ನು ರೂ.೧೦ ಮತ್ತು ೧೩೦ಕ್ಕೆ ಖರೀದಿಸಬಹುದು ಎಂದು ಹೇಳಿದೆ. ಈ ಕೊಡುಗೆ ದೇಶೀಯ ಮತ್ತು ಆಯ್ದ ಅಂತಾರಾಷ್ಟ್ರೀಯ ಮಾರ್ಗಗಳಿಗೂ ಅನ್ವಯಿಸುತ್ತದೆ. ನಿನ್ನೆ ಆರಂಭವಾದ ಆಫರ್ ಭಾನುವಾರ ಮಧ್ಯರಾತ್ರಿ ೧೧.೫೯ಕ್ಕೆ ಕೊನೆಗೊಳ್ಳುತ್ತದೆ.
ಈ ಮೊದಲು ಬುಕ್ ಮಾಡಿದ ಪ್ರಯಾಣಿಕರು ಸೆಪ್ಟೆಂಬರ್ ೧ ರಿಂದ ಅಕ್ಟೋಬರ್ ೩೧ ರ ನಡುವೆ ಪ್ರಯಾಣಿಸಬೇಕಾಗುತ್ತದೆ ಎಂದು ಏರ್ ಇಂಡಿಯಾ ತಿಳಿಸಿದೆ. ಏರ್ ಇಂಡಿಯಾದ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಕಂಪನಿಯ ಮೂಲಗಳು ಸೂಚಿಸಿವೆ. ಮುಂಬರುವ ಹಬ್ಬದ ಋತುವಿನಲ್ಲಿ ವಿಮಾನದಲ್ಲಿ ಪ್ರಯಾಣಿಸಲು ಬಯಸುವವರನ್ನು ಗಮನದಲ್ಲಿಟ್ಟುಕೊಂಡು ಈ ಕೊಡುಗೆಯನ್ನು ನೀಡಲಾಗಿದೆ .ರಿಟರ್ನ್ ಟಿಕೆಟ್‌ಗಳನ್ನು ಬುಕ್ ಮಾಡಿದ ಪ್ರಯಾಣಿಕರು ಡಬಲ್ ಲಾಯಲ್ಟಿ ಬೋನಸ್ ಅಂಕಗಳನ್ನು ಸಹ ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.