ಪ್ರಯತ್ನದಿಂದ ಗುರಿ ಸಾಧನೆ ಸಾಧ್ಯ

(ಸಂಜೆವಾಣಿ ವಾರ್ತೆ)
ಬಾದಾಮಿ,ಆ24: ಮನುಷ್ಯನಿಗೆ ಅಸಾಧಾರಣ ಮತ್ತು ಅಪರಿಮಿತ ಸಾಮಥ್ರ್ಯ ಇದೆ. ವಿದ್ಯಾರ್ಥಿಗಳು ಸಾಮಥ್ರ್ಯ ಮತ್ತು ಅಪರಿಮಿತ ಸಾಧನೆಯಿಂದ ಭವಿಷ್ಯದ ಗುರಿಯನ್ನು ಮುಟ್ಟಲು ಸಾಧ್ಯ’ ಎಂದು ವಿಶ್ವ ದಾಖಲೆಯ ಅಂಧ ಕ್ರೀಡಾಪಟು ನಾನು ಪಾಟೀಲ ಹೇಳಿದರು.
ಅವರು ಪಟ್ಟಣದ ಎಸ್.ವಿ.ಪಿ.ಸಂಸ್ಥೆಯ ಎಸ್.ಬಿ. ಮಮದಾಪೂರ ಪದವಿ ಕಾಲೇಜಿನಲ್ಲಿ ಸಾಂಸ್ಕøತಿಕ-ಕ್ರೀಡಾ ಚಟುವಟಿಕೆಗಳ ಸಮಾರೋಪ, ದೀಪದಾನ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಬದುಕಿನಲ್ಲಿ ಅಡೆತಡೆಗಳು ಬರುತ್ತವೆ. ಆದರೆ ಈಗ ಶಿಕ್ಷಣ ಪಡೆಯಲು ಯಾವುದೇ ತೊಂದರೆ ಇಲ್ಲ. ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಕೊಡುತ್ತಿವೆ. ಆದರೆ ಹೊಸ ಪೀಳಿಗೆಯಿಂದ ಓದುವಿಕೆ ಕಡಿಮೆಯಾಗತೊಡಗಿದೆ. ಮೊಬೈಲ್ ಗೀಳು ಹೆಚ್ಚಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಉತ್ತಮ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು. ಶಿಕ್ಷಣ ಸಂಸ್ಥೆಯ ಪೋಷಕರ ಋಣವನ್ನು ತೀರಿಸಬೇಕು ಎಂದು ಶ್ರೀಮದ್ವೀರಶೈವ ಸಂಸ್ಥೆಯ ಶಿವಯೋಗಮಂದಿರ ಉಪಾಧ್ಯಕ್ಷ ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಆಶೀರ್ವಚನದಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ದಾನಿಗಳು, ಸಾಧಕರು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೀರಪುಲಿಕೇಶಿ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಪಟ್ಟಣ ಎ.ಸಿ. ಪಟ್ಟಣದ ಅಧ್ಯಕ್ಷತೆ ವಹಿಸಿದ್ದರು. ಜೆ.ಎಸ್. ಮಮದಾಪೂರ, ಪಂಪಣ್ಣ ಕಾಚಟ್ಟಿ, ವಿ.ಎನ್.ನಿಲುಗಲ್, ರಾಜಶೇಖರ ಎಸ್.ಬಸುಪಟ್ಟದ ವಿದ್ಯಾರ್ಥಿಗಳ ಪ್ರತಿನಿಧಿ ಕುಮಾರೇಶ ಕಾತರಕಿ, ಪ್ರಾಚಾರ್ಯ ಆರ್.ಎಸ್. ಮೂಲಿಮನಿ ಇದ್ದರು.