ಪ್ರಮುಖ ಸಮುದಾಯಗಳಿಗೆ ಡಿ.ಸಿ.ಎಂ ಸ್ಥಾನ ಸಚಿವರ ಬೆಂಬಲ


ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.17: ರಾಜ್ಯದಲ್ಲಿನ  ಪ್ರಮುಖ ಸಮುದಾಯಗಳಿಗೆ ಡಿಸಿಎಂ‌ ಸ್ಥಾನ ಕೊಟ್ರೇ ಒಳ್ಳೆಯದು ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ. ಮುಂಬರುವ ಚುನಾವಣೆಗಳ ದೃಷ್ಟಿಯಲ್ಲಿ ವೀರಶೈವ, ಎಸ್ಸ ಎಸ್ಟಿ, ಅಲ್ಪಸಂಖ್ಯಾತರಿಗೆ ಡಿಸಿಎಂ ಸ್ಥಾನ‌ ನೀಡಬೇಕೆಂದು ಸಚಿವ ಕೆ.ಎನ್.ರಾಜಣ್ಣ ನೀಡಿದ ಹೇಳಿಕೆಯನ್ನು ಸಚಿವ ನಾಗೇಂದ್ರ ಅವರು ಸಹ ಸಮರ್ಥಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆಶಿ ಅವರಿ ಒಳ್ಳೆಯ ಕೆಲಸ ಮಾಡ್ತಿದ್ದಾರೆ.
ಹೆಚ್ಚುವರಿ ಡಿಸಿಎಂ ಸೃಷ್ಟಿಸಿದ್ರೆ ಎಲ್ಲ ಸಮುದಾಯಗಳನ್ನು ಜೊತೆಗೆ ಇಟ್ಟುಕೊಂಡು ಹೋಗಬಹುದು.ಹೆಚ್ಚುವರಿ ಡಿಸಿಎಂ ಹುದ್ದೆಯಿಂದ  ಲೋಕಸಭೆ  ಚುನಾವಣೆಗೆ ಅನುಕೂಲವಾಗತ್ತದೆ. ಡಿಸಿಎಂ ಏನು ಸಾಂವಿಧಾನಿಕ ಹುದ್ದೆ ಅಲ್ಲ. ಕಳೆದ ಸರ್ಕಾರದದಲ್ಲಿ ಮೂರು ಡಿಸಿಎಂ ಕೊಟ್ಟಿದ್ರು ಎಂದರು
ನಾನು ಡಿಸಿಎಂ ಆಕಾಂಕ್ಷಿ ಅಲ್ಲ, ನನ್ನ ಮಂತ್ರಿ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡಿದ್ದಾರೆ ಕೊಟ್ಟ ಕೆಲಸ ಮಾಡಿಕೊಂಡು ಹೋಗುವೆ ಎಂದರು.
ದಲಿತರ ಅನುದಾನವನ್ನ ಇತರೆ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ ಎನ್ನುವ ಬಿಜೆಪಿ ಆರೋಪವನ್ನು ತಳ್ಳಿಹಾಕಿದ ಅವರು.
ಸಿದ್ದರಾಮಯ್ಯ ಸರ್ಕಾರ 7ಡಿ ಆ್ಯಕ್ಟ್ ನ್ನು ತೆಗೆದಿದೆ. ಬಿಜೆಪಿ 7 ಡಿ ಎನ್ನುವ ಕಳ್ಳ ಕಿಂಡಿ ಮಾಡಿಕೊಂಡಿತ್ತು. ಅದರ  ಮೂಲಕ ಎಸ್ಸಿ ಎಸ್ಟಿ ಇಲಾಖೆಯ ಹಣವನ್ನು ಬೇರೆ ಕಡೆ ವರ್ಗಾಯಿಸುತ್ತಿದ್ದರು.
ಈಗ ಸಿದ್ದರಾಮಯ್ಯ ನವರು ಸಿಎಂ ಆದಮೇಲೆ 7 ಡಿ ತೆಗೆದಿದ್ದಾರೆ.ಆ ಮೂಲಕ ನಮ್ಮ ಸರ್ಕಾರ ದಲಿತರ ಪರ ನಿಂತಿದೆ ಎಂದರು.
ಎಸ್ ಎಸ್ಟಿಗೆ 29 ಸಾವಿರ ಕೋಟಿ ಇದ್ದ ಅನುದಾನ ಈಗ  39 ಸಾವಿರ ಕೋಟಿಗೆ ಏರಿಕೆಯಾಗಿದೆಂದರು.