ಪ್ರಮುಖ ಆರೋಪಿ ಬಂಧನವಕೀಲನ ಇಪ್ಪತ್ತು ಬಾರಿ ಕೊಚ್ಚಿ ಕೊಂದು ಕ್ರೌರ್ಯ ಮೆರೆದರು

ಕಲಬುರಗಿ,ಡಿ.10-ನಗರದ ಜೇವರ್ಗಿ ರಸ್ತೆಯ ಸಾಯಿ ಮಂದಿರ ಹತ್ತಿರದ ಅಪಾರ್ಟ್‍ಮೆಂಟ್ ಬಳಿ ಗುರುವಾರ ನಡೆದ ವಕೀಲ ಈರಣ್ಣಗೌಡ ಪೊಲೀಸ್ ಪಾಟೀಲ ಹತ್ಯೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಂತಹವರನ್ನು ಬೆಚ್ಚಿ ಬೀಳಿಸುವಂತಿವೆ. ಕೊಲೆಗಾರರು ಕೈಯಲ್ಲಿ ಮಚ್ಚು ಹಿಡಿದುಕೊಂಡು ಈರಣ್ಣಗೌಡ ಅವರನ್ನು ಬೆನ್ನಟ್ಟಿ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಮತ್ತು ಅವರು ನೆಲಕ್ಕುರಿಳಿದಾಗ ಸುಮಾರು 20 ಬಾರಿ ಕೊಚ್ಚಿ ಕೊಲೆ ಮಾಡಿದ ದೃಶ್ಯಾವಳಿಗಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈರಣ್ಣಗೌಡ ಅವರನ್ನು ಮನಬಂದಂತೆ ಕೊಚ್ಚಿ ಕೊಲೆ ಮಾಡುವುದರ ಮೂಲಕ ಕೊಲೆಗಾರರು ಕ್ರೌರ್ಯ ಮೆರೆದಿದ್ದಾರೆ. ಹಾಡು ಹಗಲೇ ನಡೆದ ವಕೀಲನ ಈ ಕೊಲೆ ಪ್ರಕರಣ ನಗರದ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಪ್ರಕರಣ ದಾಖಲಿಸಿಕೊಂಡ ವಿಶ್ವವಿದ್ಯಾಲಯ ಠಾಣೆ ಪೊಲೀಸರು 24 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ನೀಲಕಂಠಗೌಡ ಪೊಲೀಸ್ ಪಾಟೀಲ ಮತ್ತು ಅವರ ಪತ್ನಿ ಸಿದ್ದಮ್ಮ ಅವರನ್ನು ಶನಿವಾರ ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.