ಪ್ರಮಾಣ ವಚನ ಬೋದಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನ

ಕಲಬುರಗಿ:ಜು.24: ಕಲಬುರಗಿ ತಾಲೂಕಿನ ಬಸವಪಟ್ಟಣ ಗ್ರಾಮ ಪಂಚಾಯತ ಹಾಗೂ ಸಾಮ್ರಾಟ ಅಶೋಕ ಚಾರಿಟೇಬಲ್ ಟ್ರಸ್ಟ್ ಮಲ್ಲಾಬಾದ ಇವರ ಸಂಯುಕ್ತ ಆಶ್ರಯದಲ್ಲಿ 2022 23ನೇ ಸಾಲಿನ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಐಇಸಿ ಚಟುವಟಿಕೆಯ ಉಪನ್ಯಾಸ ಹಾಗೂ ಸ್ಟಿಕರ್ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ, ಸ್ಟಿಕರ್ ಬಿಡುಗಡೆ ಮಾಡಿ ಮಾತನಾಡಿದ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಶೇಖಪ್ಪ ಶಂಕು ಗ್ರಾಮಸ್ಥರೆಲ್ಲರೂ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಬೇಕು, ಗ್ರಾಮದ ಒಳಚರಂಡಿ ಹಾಗೂ ಹೊರ ಚರಂಡಿಗಳ ಸ್ವಚ್ಛತೆ, ಒಣಕಸ ಹಾಗೂ ಹಸಿಕಸ ಬೇರ್ಪಡಿಸುವಿಕೆ, ನಮ್ಮ ಮನೆ, ನಮ್ಮ ಓಣಿ, ನಮ್ಮ ರಸ್ತೆ, ನಮ್ಮ ವಾರ್ಡ, ನಮ್ಮ ಗ್ರಾಮ, ನಮ್ಮ ಪಂಚಾಯತ ಸ್ವಚ್ಛಗೊಳಿಸುವ ಮೂಲಕ ಇಡೀ ರಾಜ್ಯದಲ್ಲೇ ಒಂದು ಮಾದರಿ ಗ್ರಾಮ ಪಂಚಾಯತಯನ್ನಾಗಿ ಮಾಡೋಣ, ಅದಕ್ಕೆ ತಾವೆಲ್ಲರೂ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇದರ ಜೊತೆಗೆ ಮಧುಪಾನ, ಧೂಮಪಾನ, ತಂಬಾಕು ಸೇವನೆ, ಪ್ಲಾಸ್ಟಿಕ್ ಬಳಕೆಯ ನಿಷೇಧ,ಶಿಕ್ಷಣ,ಉದ್ಯೋಗ, ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ, ಬಾಲ್ಯವಿವಾಹ ನಿಷೇಧ ಮುಂತಾದ ಹತ್ತು ಹಲವಾರು ವಿಷಯಗಳನ್ನು ಕುರಿತು ಸುದೀರ್ಘವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ, ಗ್ರಾಮ ಪಂಚಾಯತ ಅಧ್ಯಕ್ಷ ಬೈಲಪ್ಪ ಸಣ್ಣಮನಿ, ಚಂದ್ರಶೇಖರಯ್ಯ ಹಿರೇಮಠ, ಗ್ರಾಮ ಪಂಚಾಯತ ಸದಸ್ಯರಾದ ಭೀಮಶಂಕರ್ ಕುಂಬಾರ,ಕುಶಾಲ ಬೋಜಟಿ, ಉಮೇಶ ಹೂಗಾರ, ರವಿಕುಮಾರ ಪಾಟೀಲ, ಬಸವರಾಜ ಮಾಲಿ ಪಾಟೀಲ, ಮಹಾದೇವಪ್ಪ ವಾರದ, ನಾಗರಾಜ ನೆಲೋಗಿ, ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಸೇರಿದಂತೆ ಅನೇಕರಿದ್ದರು