ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸಿದ ನಂತರ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ದಂಪತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಕ್ಯಾಮರಾಗಳಿಗೆ ಫೋಸ್ ನೀಡಿದ್ದು ಹೀಗೆ.
ಬೆಂಗಳೂರು,ಮೇ೨೭: ಕಾಂಗ್ರೆಸ್ ಸರ್ಕಾರದ ನೂತನ ಸಚಿವರುಗಳ ಪ್ರಮಾಣವಚನ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ಪತ್ನಿ ಗೀತಾ ಶಿವರಾಜ್‌ಕುಮಾರ್ ಉಪಸ್ಥಿತರಿದ್ದು ಮಧುಬಂಗಾರಪ್ಪ ಅವರ ಪ್ರಮಾಣವಚನವನ್ನು ಕಣ್ತುಂಬಿಕೊಂಡರು.ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪರವರ ಕಿರಿಯ ಪುತ್ರರಾದ ಮಧುಬಂಗಾರಪ್ಪ ಶಿವರಾಜ್‌ಕುಮಾರ್ ಅವ ಪತ್ನಿ ಗೀತಾ ಅವರ ಸಹೋದರರಾಗಿದ್ದಾರೆ. ಇವರ ಪರವಾಗಿ ಚುನಾವಣೆಯಲ್ಲಿ ಇವರಿಬ್ಬರು ಪ್ರಚಾರ ಮಾಡಿದ್ದರು.
ಸಂತಸ
ಮಧು ಬಂಗಾರಪ್ಪ ಸಚಿವರಾಗುತ್ತಿರುವುದಕ್ಕೆ ನಟ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್‌ಕುಮಾರ್ ಸಂತಸ ವ್ಯಕ್ತಪಡಿಸಿ ಮಧುಬಂಗಾರಪ್ಪ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಒಳ್ಳೆಯಮನುಷ್ಯ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದು ನನಗೆ ಸಂತಸ. ಇದರಿಂದ ಜನರಿಗೆ ಒಳ್ಳೆಯದಾಗಲಿದೆ ಎಂಬ ಭಾವನೆ ತಮ್ಮದು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬಗ್ಗೆಯೂ ಮೆಚ್ಚುಗೆಯ ಮಾತನಾಡಿಲ್ಲ. ಶಿವರಾಜ್‌ಕುಮಾರ್ ಸಿದ್ದರಾಮಯ್ಯರವರು ದೊಡ್ಡ ರಾಜಕಾರಣಿ, ನನ್ನನ್ನು ಪ್ರೀತಿಯಿಂದ ನನ್ನನ್ನು ಪ್ರಚಾರಕ್ಕೆ ಕರೆದಿದ್ದರು, ನಾನು ಅಷ್ಟೇ ಪ್ರೀತಿಯಿಂದ ಪ್ರಚಾರಕ್ಕೆ ಹೋಗಿದೆ. ನನ್ನ ತಂದೆಯವರೂ ಸಹ ಸಿದ್ದರಾಮಯ್ಯರವರನ್ನು ನಮ್ಮ ಕಾಡನವರು (ನಮ್ಮ ಊರಿನವರು) ಎಂದು ಮಾತನಾಡುತ್ತಿದ್ದುದನ್ನು ನೆನಪಿಸಿಕೊಂಡರು.