ಪ್ರಮಾಣ ಬದ್ದವಾಗಿ ನೀರು ಹರಿಸಲು ರೈತ ಮುಖಂಡರು ಒತ್ತಾಯ

ರಾಯಚೂರು, ಸೆ.೨೨, ನೀರಾವರಿ ಇಲಾಖೆ ನಂ.೪ ಇಇ ವಿಭಾಗ ಸಿರವಾರ, ಉಪ ವಿಭಾಗ ಮಾನವಿ ಮೈಲ್ ೯೦ ಹಾಗೂ ನಂತರದ ಕಾಲುವೆಗಳಿಗೆ ಪ್ರಮಾಣಬದ್ಧವಾಗಿ ನೀರು ಹರಿಸುವ ಹರಿಸುವಂತೆ ಒತ್ತಾಯಿಸಿ ತುಂಗಭದ್ರಾ ಎಡದಂಡೆ ಕಾಲುವೆ ರೈತರ ವೇದಿಕೆ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆ ನೀರಾವರಿ ಪ್ರದೇಶಕ್ಕೆ ಒಳಪಟ್ಟಿರುವ ಮೈಲ್ ೯೦ ಹಾಗೂ ನಂತರದ ಕಾಲುವೆಗಳು ತೀವ್ರ ನೀರಿನ ಕೊರತೆ ಎದುರಿಸುತ್ತಿವೆ, ಬೆಳೆದಿರುವ ಬೆಳೆಗಳು ಬಾಡುತ್ತಿವೆ. ಮಳೆ ನಿಂತು ಹೋಗಿರುವ ಕಾರಣ ಕಾಲುವೆ ನೀರನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಆಗ್ರಹಿಸಿದರು.
ಕಾಲುವೆಯಲ್ಲಿ ನೀರು ಬರುತ್ತಿಲ್ಲ, ಬೆಳೆಗಳು ಬಾಡುತ್ತಿವೆ. ನಾಲ್ಕೈದು ದಿನಗಳಲ್ಲಿ ನೀರು ಹರಿಸದೇ ಇದ್ದಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ಒಣಗಿ ಹೋಗುತ್ತವೆ ಎಂದು ಒತ್ತಾಯಿಸಿದರು.ಗೊಬ್ಬರ, ಎಣ್ಣೆ, ಕಳೆ ತೆಗೆಯಲು ಪ್ರತಿ ಎಕರೆಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬೆಳೆದ ಬೆಳೆ ಒಣಗಿ ಹೋಗುತ್ತಿವೆ. ಪರಿಸ್ಥಿತಿ ತೀರಾ ಹದಗೆಟ್ಟು ಮುಂದೆ ದಾರಿಕಾಣದಾಗಿದೆ. ದಯವಿಟ್ಟು ಆದಷ್ಟು ತ್ವರಿತವಾಗಿ ಕ್ರಮ ಕೈಗೊಂಡು ಕಾಲುವೆಗೆ ನೀರು ಹರಿಯುವಂತೆ ಮಾಡಿ ಬೆಳೆಗಳು ಬಾಡದಂತೆ ಕ್ರಮವಹಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಾಮರಾಜ ಪಾಟೀಲ್ ಹಾಗೂ ರೈತ ಮುಖಂಡರು ಇದ್ದರು.