ಪ್ರಮಾಣ ಪತ್ರ ವಿತರಣೆ  ಕಾರ್ಯಕ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)                                                   
ಬಳ್ಳಾರಿ, ಜ.13: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ  ಸಭಾಂಗಣದಲ್ಲಿ ಬಳ್ಳಾರಿ ಚೇಂಬರ್ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಡಾ!! ಡಿ.ಎಲ್. ರಮೇಶ್ ಗೋಪಾಲ್, ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷರಾದ ಸಿ. ಶ್ರೀನಿವಾಸ ರಾವ್ ಮತ್ತು  ಸಂಸ್ಥೆಯ  ಗೌರವ ಕಾರ್ಯದರ್ಶಿಗಳಾದ ಯಶವಂತರಾಜ್ ನಾಗಿರೆಡ್ಡಿ, ಶ್ರೀಮತಿ ರಮಾ ಆನಂದರಾವ್, ಹಿರಿಯ ವಕೀಲರು, ಹಾಗೂ ಶ್ರೀಮತಿ ಪದ್ಮಾವತಿ ಶ್ರೀನಿವಾಸ್, ಮಹಿಳಾ ವಿಭಾಗದ, ಅಧ್ಯಕ್ಷರು,ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು. ನಂತರ ಯಶವಂತ ರಾಜ್ ನಾಗಿ ರೆಡ್ಡಿ, ಮಾತನಾಡುತ್ತಾ, ನಮ್ಮ ಸಂಸ್ಥೆ ನೀಡುತ್ತಿರುವ ಉಚಿತ ಶಿಕ್ಷಣದಿಂದ ವಿದ್ಯಾರ್ಥಿ/ ವಿದ್ಯಾರ್ಥಿನಿಯರು  ಸದುಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕೆಂಬ ನಮ್ಮ ಆಶಯ ಎಂದು ತಿಳಿಸಿದರು. ನಂತರ ಸಿ. ಶ್ರೀನಿವಾಸ್ ರಾವ್ ಅಧ್ಯಕ್ಷರು ಮಾತನಾಡುತ್ತಾ, ಸಂಸ್ಥೆ ನಡೆದ ಬಂದ ದಾರಿ, ಸಂಸ್ಥೆ ನಡೆಸುತ್ತಿರುವ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಶ್ರೀಮತಿ ರಮ ಆನಂದ ರಾವ್ ಮಾತನಾಡುತ್ತಾ, ನೀತಿ ಕಥೆ ಹೇಳುವುದರ  ಮೂಲಕ  ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಶ್ರೀಮತಿ ಪದ್ಮಾವತಿ ಶ್ರೀನಿವಾಸ್, ಮಾತನಾಡುತ್ತ  ಸಂಪತ್ತು ಕಳೆದುಹೋದಾಗ ಏನೂ ನಷ್ಟವಾಗುವುದಿಲ್ಲ; ಆರೋಗ್ಯ ಕಳೆದುಹೋದಾಗ, ಏನಾದರೂ ಕಳೆದುಹೋಗುತ್ತದೆ; ಪಾತ್ರವು ಕಳೆದುಹೋದಾಗ, ಎಲ್ಲವೂ ಕಳೆದುಹೋಗುತ್ತದೆ. ಆದಕಾರಣ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿನ ಕಡೆಗೆ ಗಮನ ಕೊಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ನಂತರ ವೇದಿಕೆ ಮೇಲಿರುವ ಗಣ್ಯರು ಹಾಗೂ ಇನ್ನಿತರ ಗಣ್ಯರು 180 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.
ಚೇರ್ಮನ್ ನಾಗಳ್ಳಿ ರಮೇಶ್, ಚೇರ್ಮನ್,ವಂದನಾರ್ಪಣೆಯನ್ನು ಮಾಡಿದರು.ಈ ಸಂದರ್ಭದಲ್ಲಿ  ಡಾ. ಮರ್ಚೆಡ ಮಲ್ಲಿಕಾರ್ಜುನ್, ಆರ್. ಪಿ. ರಾಮಕೃಷ್ಣ, ಕೋ- ಚೇರ್ಮನ್, ಕೃಷ್ಣಕಾಂತ್, ಪ್ರಶಾಂತ್ ಚತ್ರಿಕಿ, ರಾಘವೇಂದ್ರ ರೆಡ್ಡಿ, ವೇಣುಗೋಪಾಲ ಗುಪ್ತಾ ಉಪಸ್ಥಿತರಿದ್ದರು.