ಪ್ರಮಾಣ ಪತ್ರಕಿಂತ ಪ್ರಮಾಣಿಕತೆಯಿಂದ ಕಲಿಯಲು ಮುಂದೆ ಬನ್ನಿ :ಗರೂರ

ಕಲಬುರಗಿ:ಜು.24: ನಗರದ ಬಸವ ಸಿರಿ ಕಂಪ್ಯೂಟರ್ ತರಬೇತಿ ಕೇಂದ್ರದ ವತಿಯಿಂದ ಬಡ ಮತ್ತು ಪ್ರತಿಭಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ, ಇಂದು ಮುಂಜಾನೆ. 11 ಗಂಟೆಗೆ ನಡೆದ ಉಚಿತ ಕಂಪ್ಯೂಟರ್ ತರಬೇತಿಯಲ್ಲಿ ಬಾಗವಹಿಸಿದ ವಿದ್ಯರ್ಥಿಗಳನ್ನು ಉದ್ದೆಶಿಸಿ ಮಾತನಾಡಿದ ಟ್ರಷ್ಟ ಅಧ್ಯಕ್ಷ ಮಲ್ಲಿಕಾರ್ಜುನ ಗರೂರ್ ಅವರು ಪ್ರಮಾಣ ಪತ್ರಕಿಂತ ಪ್ರಮಾಣಿಕತೆಯಿಂದ ಕಲಿಯಲು ಮುಂದೆ ಬನ್ನಿ ಎಂದು ಗರೂರರವರು ನಿರುದ್ಯೋಗಿ ಯುವಕರಿಗೆ ಕರೆನೆಡಿದರು.
ಬೇಸಿಕ್, ಡೇಟಾ ಎಂಟ್ರಿ ಆಪರೇಟರ್, (ನುಡಿ,ಇನ್‍ರ್ಟನೇಟ) ಟ್ಯಾಲಿ ಇಆರ್‍ಪಿ9 ಜಿಎಸ್‍ಟಿ, ಜಿಡಿಸಿ (ಗ್ರಾಫೀಕ್‍ಡಿಜ್ಯಾನಿಂಗ್) ವೆಬ್ ಡೆವಲಪರ್ ವಿವಿದ ಕೋರ್ಸಗಳ ಉದ್ಯೋಗ ಆಧಾರಿತ ಕಂಪ್ಯೂಟರ್ ತರಬೇತಿ ಸತತವಾಗಿ 7 ವರ್ಷಗಳಿಂದ ನಮ್ಮ ಸಂಸ್ಥೆ ವತಿಯಿಂದ ನಿಡುತ್ತಿದ್ದು ಅನೇಕ ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡು ಸರಕಾರಿ, ಅರೆಸರಕಾರಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿದಾರೆ ತಾವು ಹಾಗೆ ಪ್ರಮಾಣಿಕತೆಯಿಂದ ಕಲಿತು ಬಡತನದಿಂದ ಮುಂದೆ ಬಂದು ನಿಮ್ಮ ಕಾಲಮೇಲೆ ನೀವು ನಿಂತ್ತು ಉದ್ಯೊಗ ಮಾಡಿ ನಿಮ್ಮ ಕುಟುಂಬವನ್ನು ಸಂತೋಷದಿಂದ ಬದುಕಿಸ ಬೇಕೆಂಬುವದೆ ನಮ್ಮ ಸಂಸ್ತೆಯ ಗುರಿಯಾಗಿದೆ ಎಂದು ತಿಳಿಸಿದರು.