
ರಾಯಚೂರು,ಮಾ.೧೩- ನಿನ್ನೆ ರಾತ್ರಿ ಬೈಕ್ ಅಪಘಾತದಲ್ಲಿ ಆಂಧ್ರ ಮೂಲದ ಗಾಯಗೊಂಡ ವ್ಯಕ್ತಿಗಳನ್ನು ಆಸ್ಪತ್ರೆ ಸೇರಿಸಿ ಗಯಾಳುನಲ್ಲಿದ್ದ ಬಂಗಾರದ ಸರ ಮೊಬೈಲ್ ಫೋನ್ ಪರ್ಸ್,ಅವರ ಕುಟುಂಬಕ್ಕೆ ನೀಡುವ ಮೂಲಕ ೧೦೮ ಆಂಬುಲೆನ್ಸ್ ವಾಹನದ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ದುಗುನೂರು ಕ್ರಾಸ್ ಬಳಿ, ಅಪರಿಚಿತಗಾಡಿ ಬೈಕ್ ಗೆ ಡಿಕ್ಕಿಯಾಗಿ ಸ್ಥಳದಲ್ಲಿ ಬೈಕ್ ಸವಾರ ಮೃತಪಟ್ಟರು ಇನ್ನೊಬ್ಬ ತೀವ್ರವಾಗಿ ಗಾಯಗೊಂಡದ್ದರು, ಅವರನ್ನು ೧೦೮ ಆರೋಗ್ಯ ಕವಚ ಆಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಥಮ ಚಿಕಿತ್ಸೆ ಕೊಡುವ ಸಂಧರ್ಭದಲ್ಲಿ ಬೈಕ್ ಸವಾರನಾ ಬಳಿ ಬಂಗಾರದ ಸರ ಮೊಬೈಲ್ ಫೋನ್, ಪರ್ಸ್ ರಿಮ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಹಾಗೂ ವೈದ್ಯಕೀಯ ಅಧಿಕಾರಿ ಇವರ ಸಮ್ಮುಖದಲ್ಲಿ ಆರೋಗ್ಯ ಕವಚ ೧೦೮ ವಾಹನದ ಸಿಬ್ಬಂದಿ ಶುಶ್ರೂಷಕ ಶಿವಯೋಗಿ ಚಾಲಕ ಫರೀದ್ ಅಹ್ಮದ್ ಬಂಗಾರದ ಸರ ಮೊಬೈಲ್ ಫೋನ್ ಪರ್ಸ್ ಗಯಾಳು ಕುಟುಂಬಕ್ಕೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.