ಪ್ರಮಾಣಿಕತೆಯಿಂದ ಕೆಲಸ ಮಾಡುವ ಪೌರಕಾರ್ಮಿಕರೇ ಕಾಯಕ ಜೀವಿಗಳು


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಸೆ.24 ಬೆಳಿಗ್ಗೆ ದಿನನಿತ್ಯ ಪ್ರಮಾಣಕತೆಯಿಂದ ಕೆಲಸ ಮಾಡುವ ಪೌರ ಕಾರ್ಮಿಕರೇ  ನಿಜವಾದ ಕಾಯಕ ಜೀವಿಗಳು ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್ ಹೇಳಿದರು.
 ಪಟ್ಟಣದ ಗುರುಭವನದಲ್ಲಿ ಶನಿವಾರ ಆಯೋಜಿಸಿದ್ದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ದೇಶದ ಪ್ರಧಾನಿ ಪೌರಕಾರ್ಮಿಕರ ಪಾದ ತೊಳೆದು ಅವರಿಗೆ ಗೌರವ ಸಲ್ಲಿಸಿದರು. ಇಂತಹ ಕಾಯಕ ಜೀವಿಗಳ  ದಿನಾಚರಣೆ ಮಾಡುವುದು ನನಗೆ ಹೆಮ್ಮೆ ಅನಿಸುತ್ತದೆ. ಸರ್ಕಾರದ ಯೋಜನೆಗಳು ಪೌರಕಾರ್ಮಿಕರ ಮನೆ ಬಾಗಿಲಿಗೆ ತಲುಪಿಸುವ ಕೆಲಸವಾಗಬೇಕು. ಅಮೃತ್ ಎರಡು ಯೋಜನೆ ಅಡಿ ಪಟ್ಟಣಕ್ಕೆ ದಿನ ನಿತ್ಯ ಕುಡಿಯುವ ನೀರು ಒದಗಿಸಬೇಕೆಂಬ 30 ಕೋಟಿ  ರೂ. ವೆಚ್ಚದಲ್ಲಿ ಯೋಜನೆಯನ್ನು ಸಿದ್ದಪಡಿಸಲಾಗುವುದು. ಜೊತೆಗೆ ಕೆಎಂಆರ್‌ಎಸ್‌ ಅಡಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
 ಕಾರ್ಯಕ್ರಮದ ಸಾನಿಧ್ಯವನ್ನು ಹಾಲಸಿದ್ದೇಶ್ವರ ಸ್ವಾಮಿ , ಚರಂತಿೇಶ್ವರ ಸ್ವಾಮಿ ವಹಿಸಿದ್ದರು
 ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ದೀಪಕ್ ಕಠಾರಿ, ನಾಗರಾಜ್ ಜನ್ನು, ಗಂಗಾಧರ್, ರಾಜೇಶ್ ಬ್ಯಾಡಗಿ, ಬೋವಿ ವೀರೇಶ್, ಅಂಬಳಿ ಮಂಗಳ, ಎಚ್ ಎಂ ಚೆನ್ನಮ್ಮ  ವಿಜಯಕುಮಾರ್, ಮುಖ್ಯಾಧಿಕಾರಿ ಪ್ರಭಾಕರ್ ಎಂ ಪಾಟೀಲ್, ಮುಖಂಡರಾದ ಜೆಡಿಎಸ್ ತಾಲೂಕಾಧ್ಯಕ್ಷ ವೈ ಮಲ್ಲಿಕಾರ್ಜುನ್, ಉಪಾಧ್ಯಕ್ಷ ಕೃಷ್ಣಮೂರ್ತಿ ರಾಜು ಪಾಟೀಲ್ ಸರ್ದಾರ್ ಯಮನೂರ್, ರೋಹಿತ್ ಪಾಂಡು ನಾಯ್ಕ್, ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
 ಕಾರ್ಯಕ್ರಮದಲ್ಲಿ 10 ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಅಧಿಕಾರಿ ಬಸವರಾಜ್  ನಿರ್ವಹಿಸಿದರು..

One attachment • Scanned by Gmail