ಪ್ರಭು ಚೌಹಾಣ್‌ರನ್ನು ಸಂಪುಟದಿಂದ ಕೈ ಬಿಡಲು ಒತ್ತಾಯ

ರಾಯಚೂರು,ಮಾ.೧೫- ಪಶುಸಂಗೋಪನ ಸಚಿವ ಪ್ರಭು ಚೌಹಾಣ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಹಾಗೂ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿ ಮಾದಿಗ ಮೀಸಲಾಯಿ ಹೋರಾಟ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಸಚಿವ ಪ್ರಭು ಚೌಹಾಣ್ ಹಾಗೂ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಅವರು ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿ ಸದಾಶಿವ ವರದಿಯನ್ನು ಯಾವುದೇ ಕಾರಣಕ್ಕೆ ಜಾರಿಗೆ ತರಬಾರದು ಎಂದು ತಮ್ಮ ಸಮುದಾಯದ ಪರವಾಗಿಮನವಿ ಸಲ್ಲಿಸಿದ್ದಾರೆ.
ಈ ಇಬ್ಬರು ತಮ್ಮ ಕ್ಷೇತ್ರದಲ್ಲಿ ಶಾಸಕರಾಗಲು ಮಾದಿಗ ಸಮುದಾಯದ ಮತ್ತು ಗಳು ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಸಚಿವ ಹಾಗೂ ತಾಂಡ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರ ನಡೆ ಖಂಡನೀಯ. ಶಾಸಕರು ಸಚಿವರನ್ನೆವುದು ಮೈಮರೆತು ತಮ್ಮ ತಮ್ಮ ಜಾತಿಗೆ ಸೀಮಿತವಾಗಿ ರಾಜಕೀಯ ನಾಯಕರಲ್ಲಿ ಮನವಿ ಮಾಡುವುದು ಸಮಂಜಸವಲ್ಲ. ಈ ಮೂಲಕ ಮಾದಿಗ ಮತ್ತು ಮಾದಿಗ ಸಂಬಂಧಿಸಿದ ಉಪ ಜಾತಿಗಳಿಗೆ ದ್ರೋಹ ಎಸಗಿದ್ದಾರೆ. ಅದ್ದರಿಂದ ಈಕೂಡಲೇ ಸಿ.ಎಂ ಯಡಿಯೂರಪ್ಪ ನವರು ಪ್ರಭು ಚೌಹಾಣ್ ಹಾಗೂ ಪಿ.ರಾಜು ಅವರನ್ನು ಸಚಿವ ಸಂಪುಟ ಹಾಗೂನಿಗಮದಿಂದ ವಜಾಗೊಳಿಸಬೇಕು ಎಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ನರಸಪ್ಪ ದಂಡೋರ, ಮಾನಪ್ಪ ಮೇಸ್ತ್ರಿ, ನರಸಿಂಹಲು, ಕರಿಯಪ್ಪ, ರಂಜಿತ್ ಕುಮಾರ, ಎಸ್ ರಾಜು, ದುಳಯ್ಯ, ಗೋವಿಂದ ಈಟೇಕಾರ್, ಈರೇಶ, ಶಿವು ಸೇರಿದಂತೆ ಮತ್ತಿತರರು ಇದ್ದರು.