ಪ್ರಭು ಚವ್ಹಾಣ ಕ್ಷಮೆಗೆ ಸವಿತಾ ಸಮಾಜ ಆಗ್ರಹ

ಕಲಬುರಗಿ ಏ 3: ಬಸವ ಕಲ್ಯಾಣ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಪಶು ಸಂಗೋಪನೆ ಸಚಿವ,ಔರಾದ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಅವರು ಕ್ಷೌರ ವೃತ್ತಿಯ ಬಗ್ಗೆ ಆಡಿದರೆನ್ನಲಾದ ಅವಹೇಳನಕಾರಿ ಪದಪ್ರಯೋಗಕ್ಕೆ ಕ್ಷಮೆ ಯಾಚಿಸುವಂತೆ ಕಲಬುರಗಿ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಚಿವರು ಕ್ಷಮೆ ಕೇಳುವವರೆಗೂ ಸಮಾಜದ ವತಿಯಿಂದ ಅವರಿಗೆ ಕ್ಷೌರ ಮಾಡುವದಕ್ಕೆ ನಿಷೇಧ ವಿಧಿಲಾಗುವದು.ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವವರೆಗೂ ರಾಜ್ಯಾದ್ಯಂತ ಉಗ್ರ ಪತ್ರಿಭಟನೆ ನಡೆಸಲಾಗುವದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಬಾದಾಮಿ,ಅಂಬರೇಶ ಮಂಗಲಗಿ,ಶರಣಬಸಪ್ಪ ಸೂರ್ಯವಂಶಿ,ಪ್ರಭಾಕರ ಪೆದ್ದರಪೇಟ,ಮದನ ಗದ್ವಾಲ್,ಶಂಕರ ಕಾಳನೂರ,ಅನೀಲ ಮದ್ದೂರ,ರಾಜು ಸೇಡಂ ಸೇರಿದಂತೆ ಅನೇಕರಿದ್ದರು.