ಪ್ರಭಾರಿ ಕುಲಸಚಿವರಾಗಿ ಪ್ರೊ . ವಿ. ಟಿ. ಕಾಂಬಳೆ ಅಧಿಕಾರ ಸ್ವೀಕಾರ

ಕಲಬುರಗಿ :ಜು.19: ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಹಿರಿಯ ಡೀನರಾದ ಪ್ರೊ. ವಿ. ಟಿ. ಕಾಂಬಳೆ ಅವರು ಗುಲ್ಬರ್ಗ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದರು.

ಮೊದಲಿದ್ದ ಹಿರಿಯ ಶ್ರೇಣಿ ಕೆ. ಎ. ಎಸ್. ಅಧಿಕಾರಿ ಶರಣಬಸಪ್ಪ ಕೊಟ್ಟೆಪ್ಪಗೋಳವರಿಗೆ ಯಾದಗಿರಿ ಜಿಲ್ಲೆಗೆ ಅಪಾರ ಜಿಲ್ಲಾಧಿಕಾರಿ ಆಗಿ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಪ್ರೊ, ವಿ. ಟಿ. ಕಾಂಬಳೆ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್ ಅವರು ತಮ್ಮ ವಿವೇಚನಾ ಅಧಿಕಾರ ಬಳಸಿ ಅವರನ್ನು ನೇಮಕ ಮಾಡಲಾಗಿದೆ.

ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ. ರಾಜಕುಮಾರ ಎಂ. ದಣ್ಣೂರ, ದಲಿತ ಹೋರಾಟಗಾರ ಡಾ. ಗುಂಡಪ್ಪ ಸಿಂಗೆ, ಸಿದ್ದು ದೊಡ್ಡಮನಿ, ಮುಂತಾದವರು ಅಭಿನಂದನೆಗಳು ಸಲ್ಲಿಸಿದ್ದಾರೆ.