ಪ್ರಭಂಜನ್ ಸರಳತೆ ಜನಸೇವೆ ಮೆಚ್ಚಿ ಬಿಜೆಪಿ ತೊರೆದ ಕಾರ್ಯಕರ್ತರು

ಬಳ್ಳಾರಿ, ಏ.18: ಪಾಲಿಕೆ ಚುನಾವಣೆಯಲ್ಲಿ ಒಂದನೇ ವಾರ್ಡಿನಿಂದ ಸ್ಪರ್ಧೆ ಮಾಡಿರುವ ಮುಂಡ್ಲೂರು ಮನೆತನದ ಪ್ರಭಂಜನ್ ಕುಮಾರ್ ಅವರ ಸರಳತೆ, ಅವರಿಗೆ ಮತ ನೀಡಿ ಆಯ್ಕೆ ಮಾಡಿದರೆ, ಮುಂದಿನ ದಿನಗಳಲ್ಲಿ ತಾವು ಎದಿರಿಸುವ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಬಲ್ಲರು ಎಂಬ ಕಾರಣಕ್ಕೆ ವಾರ್ಡಿನಲ್ಲಿನ ಅನೇಕ ಬಿಜೆಪಿ ಕಾರ್ಯಕರ್ತರು. ತಮ್ಮ ಪಕ್ಷ ತೊರೆದು ನಿಮ್ಮನ್ನು ಬೆಂಬಲಿಸುವುದಾಗಿ ಪ್ರಭಂಜನ್ ಕುಮಾರ್ ಜೊತೆ ಕೈಜೋಡಿದ್ದಾರೆ.
ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರುಗಳಾದ ಬಿ.ಕ್ರಿಷ್ಣ, ಎನ್.ಲಕ್ಷ್ಮಣ, ವೆಂಕಟೇಶ್ ಬಿ, ಗೋವಿಂದ ಬಿ, ತಿಪ್ಪೇಸ್ವಾಮಿ, ಹನುಮಂತರಾಯ, ಹನುಮಂತ ಬಿ, ಗೋಪಾಲ, ಸೀನ, ರವಣಪ್ಪ, ರಮೇಶ್, ಮಧುಸೂಧನ್, ಕುಮಾರ್, ಶೇಕ್ಷಾವಲಿ, ಮಾರೇಶ್, ಆಂಜನಯ್ಯ, ಮಾಭಾಷ, ಹೊನ್ನೂರ್ ಸ್ವಾಮಿ, ದೇವಣ್ಣ, ಓಬಳೇಶ್, ರಮೇಶ್ ಬಿ, ನರಸಿಂಹಲು, ಭೂಪತಿ, ತಿಪ್ಪೇಸ್ವಾಮಿ (ಹುಲಿಗೆಮ್ಮ ಗುಡಿ) ಇವರು ನಿನ್ನೆ ಪ್ರಭಂಜನ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ನಿಮ್ಮಪರವಾಗಿ ಮತಯಾಚನೆ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಫವಿನ್ ಬಾನು ಬಿಜೆಪಿಯಿಂದ ಬಂದವರನ್ನು ಬರ ಮಾಡಿಕೊಂಡರು.
ಕಳೆದ ಬಾರಿ ಈ ವಾರ್ಡಿನಲ್ಲಿ ಕಾರ್ಪೊರೇಟರ್ ಆಗಿದ್ದ ಫವಿನ್ ಬಾನು ಅವರು ತಮ್ಮ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ನೋಡಿ, ಅವರು ನಿಮ್ಮನ್ನು ಬೆಂಬಲಿಸಿರುವುದರಿಂದ ನಾವು ಸಹ ನಿಮ್ಮಬೆಂಬಲಕ್ಕಿ ಬಂದಿರುವುದಾಗಿ ಕಾರ್ಯಕರ್ತರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಪ್ರಭಂಜನ್ ಕುಮಾರ್ ಜನಪ್ರತಿನಿಧಿಯಾಗಿ ಜನಸೇವೆ ಮಾಡುವ ಅವಕಾಶ ದೊರೆಯುವುದು ಅದೃಷ್ಷವೇ ಸರೀ. ಈ ಬಾರಿ ಆ ಅದೃಷ್ಟ ನಿಮ್ಮಲೆಲ್ಲರ ಬೆಂಬಲದಿಂದ ಈ ವಾರ್ಡಿನಿಂದ ನನ್ನದಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.