ಪ್ರಬುದ್ಧ ಸಮಾಜ ನಿರ್ಮಾಣಕ್ಕಾಗಿ ಪಾದಯಾತ್ರೆ

ಬೀದರ:ನ.12:ಬೆಂಗಳೂರಿನ ವಿವೇಕಾನಂದ.ಎಚ್. ಕೆ,ಅವರು ಜಿಲ್ಲೆಯ ವನಮಾರಪಳ್ಳಿಯಿಂದ ನವ್ಹೆಂಬರ ಒಂದರಿಂದ ಪ್ರಾರಂಭಿಸಿದ ಪಾದಯಾತ್ರೆ ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ ದಿಂದ ಬೀದರ ಗೆ ಬರುವ ಹಾದಿಯಲ್ಲಿ ಆಣದೂರ ಹತ್ತಿರ ಕ.ಸಾ.ಪ.ಅಧ್ಯಕ್ಷರಾದ ಸುರೇಶ ಚೆನ್ನಶೆಟ್ಡಿ, ಸಂಚಾಲಕರಾದ ಶಿವಶಂಕರ ಟೋಕರೆ, ಉಪಾಧ್ಯಕ್ಷರಾದ ವಿಜಯಕುಮಾರ ಗೌರೆ ಹಾರ್ದಿಕವಾಗಿ ಬರಮಾಡಿಕೊಂಡಾಗ ಅವರ ಜೊತೆಯಲ್ಲಿ ಬೀದರ ತಾ.ಕ.ಸಾ.ಪ. ಗೌರವ ಕಾರ್ಯದರ್ಶಿ ಮಹೇಶ ಗೋರನಾಳಕರ್, ಸಂತೋಷ ಬೋರಾ, ಸಂದೀಪ ಕಾಟೆ ಇಸ್ಲಾಂಪೂರ ಸಾಥ ನೀಡಿದ್ದಾರೆ.

ವಿವೇಕಾನಂದ ಮಾತನಾಡಿ, ಇಂದಿನ ವ್ಯವಸ್ಥೆಯಲ್ಲಿ ಸುಧಾರಣೆ ಹೇಳೋದಕ್ಕಿಂತ ಸ್ವತಃ ಮಾಡಿ ತೋರಿಸುವುದು ಲೇಸು. ಇಂದು ನಾನು ಕಲ್ಯಾಣ ನಾಡಿನಿಂದ ಪ್ರಾರಂಭಿಸಿದ ಪಾದಯಾತ್ರೆ ಬೆಂಗಳೂರಿನ ತನಕ ಹೋಗಿ ಜಾಗೃತಿ ಮೂಡಿಸಬೇಕೆಂಬ ಉದ್ದೇಶ ನನ್ನದಾಗಿದೆ. ಸುರೇಶ ಚೆನ್ನಶೆಟ್ಟಿ ಅವರನ್ನು ಗೌರವಿಸಿ ಇಂದು ಯುವ ಜನಾಂಗ ಎಚ್ವೆತ್ತು ಕೊಂಡರೆ ಸಮಾಜ ಶುದ್ಧೀಕರಣಗೊಳ್ಳಲು ತಮ್ಮ ಪಾದಯಾತ್ರೆ ಒಂದು ಪ್ರೇರಣೆ. ನಮ್ಮಲ್ಲಿ ಉಪದೇಶ ಪುಕ್ಕಟ್ಟೆ ಇದೆ ಆದರೆ ಅನುಷ್ಠಾನ ಶೂನ್ಯ. ಶರಣರ ಕರ್ಮಭೂಮಿ ಇಂದ ಪ್ರಾರಂಭಿಸಿದ ಜ್ಞಾನ ದೀಕ್ಷೆ ಪಾದಯಾತ್ರೆ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಶಿವಶಂಕರ ಟೋಕರೆ ಮಾತನಾಡಿ ಯುವಕರು ಮನಸ್ಸು ಮಾಡಿದರೆ ಎಂಥ ಕಷ್ಟಕರ ಕೆಲಸ ಇಷ್ಟವೆಂಬುದಕ್ಕೆ ಮಹೇಶ ಗೊರನಾಳಕರ, ಸುರೇಶ ಚೆನ್ನಶೆಟ್ಟಿ ಅವರ ಕಾರ್ಯ ಗಮನಿಸಬಹುದು. ಯುವಕರಲ್ಲಿಯ ಛಲ ಹಾಗೂ ಆತ್ಮ ಬಲ ಒಂದಾದಾಗ ಸಮಾಜದಲ್ಲಿ ಅದ್ಭುತ ಕೆಲಸ ಮಾಡಬಹುದು, ಯುವಕರು ಆದರ್ಶಗಳನ್ನು ಪಾಲಿಸಿದರೆ ಸುಸಂಸ್ಕøತ ಸಮಾಜ ನಿರ್ಮಾಣ ಸಾಧ್ಯ ಎಂದರು.