ಪ್ರಬುದ್ದ ಭಾರತ ನಿರ್ಮಾಣಕ್ಕಾಗಿ ಬಿಜೆಪಿ ಬೆಂಬಲಿಸಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.25-ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕೆಂದು ರಾಜ್ಯ ಬಿಜೆaಪಿ ಉಪಾಧ್ಯಕ್ಷ ಎನ್.ಮಹೇಶ್ ಮನವಿ ಮಾಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರದಲ್ಲಿ ಎರಡಲ್ಲ ಮೂರು ಬಾರಿ ಸಂಪರ್ಕ ಮಾಡಿದ್ದು, ಕ್ಷೇತ್ರವಾರು, ಬೂತ್ ಮಟ್ಟದಲ್ಲಿ ಬಿಜೆಪಿಯನ್ನು ಶಕ್ತಿಯುತವಾಗಿ ಸಂಘಟಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿಯ ಕುರಿತ ಸಾಧನೆಯ ಕರಪತ್ರಗಳನ್ನು ಮನೆ ಮನೆಗೆ ತಲುಪಿಸಲಾಗಿದೆ ಎಂದರು.
2029 ಕ್ಕೆ ವ್ಯಕ್ತಿ ತಲಾ ಆದಾಯ 1500 ರೂ. ಆಗಲಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿಯಿಂದಾಗಿ ವಾಹನಗಳಿಗೆ ಬಳಕೆ ಮಾಡುತ್ತಿದ್ದ ಪೆಟ್ರೋಲ್, ಡೀಸೆಲ್ ಉಳಿತಾಯದ ಜೊತೆಗೆ ಸಮಯವು ಕಡಿಮೆಯಾಗಲಿದೆ. ಪ್ರತಿ ಮನೆಗಳ ಮೇಲೆ ಸೋಲಾರ್ ಅಳವಡಿಕೆ ಚಿಂತನೆ ನಡೆಸಲಾಗಿದೆ ಹೀಗಾಗಿ ಉಚಿತ ವಿದ್ಯುತ್ ಆಗತ್ಯವೇ ಇರಲ್ಲ. ಎಲೆಕ್ಟ್ರಿಕಲ್ ವಾಹನಗಳು ಮತ್ತಷ್ಟು ಜಾರಿಯಾಗಬೇಕು. ಆಗ ಉಚಿತ ಯೋಜನೆಗಳನ್ನು ಕೇಳುವುದನ್ನು ಜನರು ಬಿಡುತ್ತಾರೆ. ಸುಲಲಿತವಾಗಿ ಬದುಕುವ ಮಾರ್ಗ ನಿರ್ಮಾಣವಾಗಲಿದೆ ಎಂದರು.
ಭ್ರμÁ್ಟಚಾರ ರಹಿತ ಆಡಳಿತ, ನಿಸ್ವಾರ್ಥ ಸೇವೆ ನರೇಂದ್ರಮೋದಿ ಅವರ ಉದ್ದೇಶವಾಗಿದೆ. ಮೋದಿಗೆ ಮತ್ತೊಂದು ಅವಕಾಶ ಕೊಡಿ. ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಅವರನ್ನು ಅತ್ಯಧಿಕ ಮತಗಳ ನೀಡಿ ಗೆಲ್ಲಿಸುವ ಮೂಲಕ ಬಿಜೆಪಿಯ ಗೆಲುವಿನ ಅಭಿಯಾನ ಚಾ.ನಗರದಿಂದಲೇ ಆರಂಭವಾಗಲಿ ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ಎನ್.ವಿ. ಫಣೀಶ್, ಸಂಚಾಲಕ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಸಹ ಸಂಚಾಲಕ ಪರೀಕ್ಷೀತ್‍ರಾಜ್, ಎಂ. ರಾಮಚಂದ್ರ, ನೂರೊಂದುಶೆಟ್ಟಿ, ಎಚ್.ಎಂ. ಬಸವಣ್ಣ, ಕಾಡಳ್ಳಿ ಶಿವರುದ್ರಸ್ವಾಮಿ ಇದ್ದರು.