ಪ್ರಬಾವಿಗಳಾಗಿದ್ದರೂ ಸಿ.ಡಿ ತನಿಖೆಗೆ ಸಿದ್ದು ಆಗ್ರಹ

ಮೈಸೂರು:ಜ:14: ಮುನಿರತ್ನ ಗೆ ಸಚಿವ ಸ್ಥಾನ ಕೊಡಲು ಸಾಧ್ಯವಾಗುವುದಿಲ್ಲ ಎಂಬುದಿದ್ದರೆ ಯಾಕೆ ಅವರನ್ನು ಪಕ್ಷಕ್ಕೆ ಸೇರಿಸಿ ಕೊಂಡಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನೆನ್ನೆ ನಡೆದ ಸಚಿವ ಸಂಪುಟ ವಿಸ್ತರಣೆ ಸಭೆಯಲ್ಲಿ ಮುನಿರತ್ನರವರಿಗೆ ಸಚಿವ ಸ್ಥಾನ ನೀಡಿಲ್ಲ. ಇದಕ್ಕೆ ಕಾರಣ ಏನು…? ನೀವು ಅವರಿಗೆ ಸಚಿವನಾಗಿ ಮಾಡುತ್ತೇನೆಂಬ ಭರವಸೆಯನ್ನು ಯಡಿಯೂರಪ್ಪರವರು ಏಕೆ ನೀಡಿದ್ದರು. ಇದೇನು ದೊಂಬರಾಟವೇ ಎಂದು ವ್ಯಂಗ್ಯವಾಡಿದ ಅವರು, ಮುನಿರತ್ನರವರ ವಿರುದ್ಧ ನ್ಯಾಯಾಲಯದಲ್ಲಿ ವಿವಾರಣೆ ನಡೆಯುತ್ತಿರುವುದು ನಿಮಗೆ ತಿಳಿದಿರಲಿಲ್ಲವೇ ಎಂದು ಹರಿಹಾಯ್ದರು.
ಇನ್ನೊಂದು ಕಡೆ ಈ ವಿಶ್ವನಾಥ್ ಕೂಡ ಬಾಯಿ ಬಡಿದು ಕೊಂಡು ಓಡಾಡುತ್ತಿದ್ದಾನೆ. ಸಿಡಿ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಬ್ಲ್ಯಾಕ್ ಮೇಲ್ ವಿಚಾರವಾಗಿ ಸುಲಭವಾಗಿ ಎಲ್ಲರಿಗೂ ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ. ವೀಕ್ ಸಿಎಂ ಇದ್ದರೆ ಮಾತ್ರ ಈ ರೀತಿ ಮಾಡಲು ಸಾಧ್ಯ ಎಂದರು. ಒಂದು ವೇಳೆ ಬ್ಲಾಕ್ ಮೇಲ್ ಮಾಡಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಿ ಎಂದು ಸಲಹೆ ನೀಡಿದರು.
ಸಿಡಿ ವಿಷಯವಾಗಿ ಅವರ ಪಕ್ಷದವರೇ ಆರೋಪ ಮಾಡಿರುವುದರಿಂದ ಇದರಲ್ಲಿ ಸತ್ಯ ಇದೆ ಅನಿಸುತ್ತಿದೆ. ನಾವು ಮಾಡಿದರೆ ವಿರೋಧ ಪಕ್ಷದವರು ಆರೋಪ ಮಾಡಿದರು ಎನ್ನುತ್ತಿದ್ದರು. ಈ ಬಗ್ಗೆ ದೂರು ನೀಡಿ ಸತ್ಯ ಹೊರಗೆ ಬರಲಿ. ಸಿಎಂ ಒತ್ತಡದಲ್ಲಿದ್ದಾರೋ ತಾಪದಲ್ಲಿದ್ದಾರೋ ಗೊತ್ತಿಲ್ಲ ಎಂದರು. ಯಡಿಯೂರಪ್ಪ ಸರ್ಕಾರದಲ್ಲಿ ಕುಟುಂಬ ರಾಜಕಾರಣ ವಿಚಾರವಾಗಿ ಈ ಹಿಂದೆಯೇ ನಾನು ರಾಜ್ಯದಲ್ಲಿ ಇಬ್ಬರು ಸಿಎಂ ಇದ್ದಾರೆಂದು ಹೇಳಿದ್ದೆ. ಅವರ ಕುಟುಂಬದ ಖಾತೆಗೆ 7 ಕೋಟಿ 40 ಲಕ್ಷ ಜಮಾ ಆಗಿದ್ದು ಇದರಿಂದಲೇ ಕುಟುಂಬದ ರಾಜಕಾರಣ ಇದೆ ಎಂಬುದು ಸ್ಪಷ್ಟವಾಗಿದೆ. ಈ ಎಲ್ಲಾ ಬೆಳವಣಿಗೆಯಿಂದ ಜನ ಬೇಸತ್ತಿದ್ದಾರೆ ಮುಂದಿನ ದಿನದಲ್ಲಿ ತೀರ್ಮಾನ ಮಾಡುತ್ತಾರೆ ಎಂದರು.
ನಾಯಕತ್ವ ಬದಲಾವಣೆ ವಿಚಾರ, ಅದು ಇಲ್ಲದಿದ್ದರೆ ಏಕೆ ಸಚಿವ ಸಂಪುಟ ವಿಸ್ತರಣೆಗೆ ಇಷ್ಟು ದಿನ ಆಯ್ತು ? ಕೈ ಕಾಲು ಕಟ್ಟಿ ಗೋಗರೆದು ವಿಸ್ತರಣೆ ಮಾಡಿದರು. ನಾಗೇಶ್ ಸಚಿವ ಸ್ಥಾನ ಕೈ ಬಿಟ್ಟಿದ್ದಕ್ಕೆ ಕಾರಣ ಕೊಟ್ಟಿಲ್ಲ. ಅವರು ಸರ್ಕಾರ ಬರಲು ಆಪರೇಷನ್ ಕಮಲಕ್ಕೆ ಒಳಗಾಗಿದ್ದರು ಎಂದು.