ಪ್ರಬಲವಾದ ರಾಷ್ಟ್ರ ನಿರ್ಮಾಣ ಸಹಕಾರದಿಂದ ಸಾಧ್ಯ: ಯಶವಂತರಾಯಗೌಡ

ಇಂಡಿ:ನ.19:ಸ್ವಾವಲಂಬನೆ ಮುಖಾಂತರ ಪ್ರಭಲವಾದ ರಾಷ್ಟ್ರ ನಿರ್ಮಾಣ ಸಹಕಾರದಿಂದ ಸಾಧ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿಸಂಘ ನಿಯಮಿತ ಹಿರೇಬೇವನೂರ ಇವರ ಸಂಯುಕ್ತಾಶ್ರಯದಲ್ಲಿ 69ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರವು ಜೀವನದ ಮಾರ್ಗವಾಗಿದ್ದು ಪ್ರಗತಿಯ ಬೆಸೆಯಲ್ಲಿ ಕಾರ್ಯ ನಿರ್ವಹಿಸುವ ವಿಧಾನವಾಗಿದೆ. ಎಲ್ಲಾ ಜನರು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಪ್ರಾಮಾಣಿಕ ಸಹಭಾಗಿತ್ವದಿಂದ ದುಡಿಯುವದು ಸಹಕಾರದ ತಿರುಳಾಗಿದೆ ಎಂದರು.

ಸಹಕಾರಿ ಚಳುವಳಿ ಆದ್ಯ ಪ್ರವರ್ತಕ ಸ್ವಾತಂತ್ರ್ಯ ಪೂರ್ವದದಲ್ಲಿಯೇ ಸಹಕಾರಿ ಅಂದೋಳನ ಪ್ರಾರಂಭಕ್ಕೆ ಕಾರಣರಾದ ಏಷ್ಯಾ ಖಂಡದ ಮೊದಲ ಸಹಕಾರಿ ಸಂಘದ ರೂವಾರಿ ಸಿದ್ದನಗೌಡ ಪಾಟೀಲರು ಎಂದರು.

ಸಹಕಾರಿ ಚಳುವಳಿ ಪ್ರಪ್ರಥಮ ಬಾರಿಗೆ ಹುಟ್ಟು ಹಾಕಿರುವುದು ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ಸಿದ್ದನಗೌಡರು ತಮ್ಮ ಗ್ರಾಮವಾದ ಕಣಗಿನಹಾಳಗೆ ರೈಲು ನಿಲ್ದಾಣವಾದರೆ ಅಭಿವೃದ್ದಿ ಸಹಕಾರಿ ಸಾಧ್ಯೆ ಎಂದು ಚಿಂತನೆ ಮಾಡಿದರು, ಸಹಕಾರಿ ಸಂಘ ಸ್ಥಾಪನೆ ಸಂದರ್ಬದಲ್ಲಿ ರೈಲು ಸ್ಥಾಪಿಸಬೇಕು ಎಂದು ಬ್ರಿಟೀಷರಿಗೆ ಷೇರತ್ತು ಹಾಕಿದರು 1905ರಲ್ಲಿ ರೈಲು ಕಣಗಿನಾಳದಲ್ಲಿ ಆರಂಭವಾಗಿ ಈಗಲೂ ಇದೆ. ಈ ರೈಲು ನಿಲ್ದಾಣಕ್ಕೆ ಸಿದ್ದನಗೌಡರು ತಮ್ಮ 40ಎಕರೆ ಜಮೀನು ಧಾನವನ್ನಾಗಿ ನೀಡಿದರು.

ಒಬ್ಬ ವ್ಯಕ್ತಿಗೆ ಜನರ ಬಗ್ಗೆ ಕಾಳಜಿ ಹಾಗೂ ಅಭಿವೃದ್ದಿ ಚಿಂತನೆಯುಳ್ಳವರಿಗೆ ದೂರದೃಷ್ಠಿಳ್ಳ ಇರುತ್ತದೆ ಎನ್ನುವುದಕ್ಕೆ ಇಂತಹ ಮಹಾನ್ ವ್ಯಕ್ತಿಗಳ ತ್ಯಾಗ ಎಂದರೆ ತಪ್ಪಾಗಲಾರದು.

ಹಿರೇಬೇವನೂರ ಕೃಷಿ ಪತ್ತಿನ ಸಹಕಾರಿ ಸಂಘ ಅನೇಕ ವರ್ಷಗಳಿಂದ ಜನರ, ರೈತರ, ವ್ಯಾಪಾರಸ್ಥರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ವೇದಮೋರ್ತಿ ದಯಾನಂದ .ಮ ಹಿರೇಮಠ ಆರ್ಶಿವಚನ ,

ನಿರ್ದೇಶಕ ಈರಣ್ಣಾ ಚ.ಪಟ್ಟಣಶೆಟ್ಟಿ, ದಾನಪ್ಪ.ಎಂ ದುರ್ಗ ,ಕಲ್ಲನಗೌಡ ಪಾಟೀಲ, ಡಾ. ರಮೇಶ. ಎಂ ಬಿರಾದಾರ, ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಮುತ್ತಪ್ಪ ಚಿಕ್ಕಬೇವನೂರ, ಸಹಕಾರ ಸಂಘಗಳಉಪ ನಿಬಂಧಕ ಚಿದಾನಂದ ನಿಂಬಾಳ, ಎಸ್.ಕೆ ಭಾಗ್ಯಶ್ರೀ , ಕೆ.ಬಿ ಪಾಟೀಲ, ಈರಣ್ಣಾ ಎನ್ ತೆಲ್ಲೂರ, ಎಂ.ಎಸ್ ದೇಸಾಯಿ, ವ್ಹಿ.ಜಿ ಜ್ಯೋಶಿ , ಮಳಸಿದ್ದ ಚಪ್ಪಳಗಾಂವ್, ಸವಿತಾ ಬಿಸನಾಳ, ಎಸ್.ಎಸ್ ತಳೇವಾಡ ಮತ್ತಿರಿದ್ದರು.