ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.23: ಶಿಸ್ತು, ಸಂಯಮ,ಸಮಯಪಾಲನೆ ಎಂಬ ಮೂರು ಸಗಳನ್ನು ಮೈಗೂಡಿಸಿ ಕೊಂಡು ತಮ್ಮ ಹರಿತವಾದ ಭಾಷಣ ಹಾಗೂ ಲೇಖನಿಯಿಂದ ಯುವಕರು,ರೈತರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿ, ತಾವು ಪಾಲ್ಗೊಂಡು ಹಲವಾರು ಬಾರಿ ಸೆರೆಮನೆ ವಾಸ ಕಂಡವರು ಡಾ.ರಾಜೇಂದ್ರ ಪ್ರಸಾದ್ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಜೇಂದ್ರ ಪ್ರಸಾದ್ ಅವರ ಜೀವನ ಮತ್ತು ಸಾಧನೆ ಕುರಿತು 6ನೇ,7ನೇ,8ನೇ ತರಗತಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ ಅವರು ಪ್ರಸಾದ್ ಅವರು ಗಾಂಧೀಜಿ ಅವರ ಅಪ್ಪಟ ಅನುಯಾಯಿಗಳಲ್ಲಿ ಒಬ್ಬರಾಗಿ ಸರಳ ಜೀವನ ಉದಾತ್ತ ಚಿಂತನೆಗಳನ್ನು ಮೈಗೂಡಿಸಿ ಕೊಂಡಿದ್ದರು. ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಯಾಗಿ 1950 ಜನವರಿ 26 ರಂದು ಅಧಿಕಾರ ಸ್ವೀಕರಿಸಿ ಸತತ ಹನ್ನೆರಡು ವರ್ಷಗಳ ಸುದೀರ್ಘ ಕಾಲ ಆಡಳಿತ ನಡೆಸಿ, ಅಧಿಕಾರ ಇರುವುದು ಜನ ಸೇವೆಗಾಗಿ ಎಂದು ಹೇಳುತಿದ್ದರು.ಲೇಖಕರಾಗಿ ಭಾರತ ಇಬ್ಭಾಗ ನಂತರ – 1946 ಹಾಗೂ ಭಾರತ ಸ್ವಾತಂತ್ರ್ಯ ನಂತರ -1960 ಪುಸ್ತಕಗಳು ಜನಮೆಚ್ಚಿಗೆ ಪಡೆದಿವೆ.ಆದ್ದರಿಂದ ವಿದ್ಯಾರ್ಥಿಗಳು ಪ್ರಸಾದ್ ಅವರ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕೆಂದು ಹೇಳಿದರು.
ಎಂಟನೇ ತರಗತಿ ಮಹೇಶ, ಪ್ರೀತಿ ಜಿಂಟಾ,ಯು.ಎಸ್. ಶಾಂತಿ, ಏಳನೇ ತರಗತಿ ಅನುಷ್ಕಾ, ಸರಿತಾ ಹಾಗೂ ಆರನೇ ತರಗತಿ ಸುನೀತಾ ಬಹುಮಾನ ಪಡೆದರು.
ಶಿಕ್ಷಕರಾದ ಮುನಾವರ ಸುಲ್ತಾನ,ಬಸವರಾಜ, ದಿಲ್ಷಾದ್ ಬೇಗಂ, ಮೋದಿನ್ ಸಾಬ್,ಚನ್ನಮ್ಮ, ಸುಧಾ, ವೈಶಾಲಿ, ಶ್ವೇತಾ, ಶಶಮ್ಮ ಮುಂತಾದವರು ಉಪಸ್ಥಿತರಿದ್ದರು