ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ದಾವಣಗೆರೆ ಜ.೧೪; ಮತದಾರರ ಸಾಕ್ಷರತೆ ಅಂಗವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತದಾರ ಸಾಕ್ಷರತಾ ಕ್ಲಬ್ ವತಿಯಿಂದ ಜಿ.ಪಂ ಸಭಾಂಗಣದಲ್ಲಿ  ನಡೆದ ರಾಜ್ಯಮಟ್ಟದ ಆನ್‌ಲೈನ್ ಪ್ರಬಂಧ ಸ್ಪರ್ಧೆಯಲ್ಲಿ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಚಿನ್ ಎನ್.ಕೆ, ಸೌಮ್ಯ.ಹೆಚ್ ಎ.ವಿ.ಕೆ ಕಾಲೇಜಿನ ಉಷಾ ಹೆಚ್, ಹರಪನಹಳ್ಳಿ ರ‍್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಯಶ್ರೀ ಎಸ್.ಎ ವಿದ್ಯರ‍್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.      ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನ ಪ್ರಾಂಶುಪಾಲರಾದ ತೂ.ಕ ಶಂಕರಯ್ಯ, ಹಳೇ ವಿದ್ಯಾರ್ಥಿಗಳುಸಂಘದ ಸಂಚಾಲಕ ಪ್ರೊ.ಭೀಮಣ್ಣ ಸುಣಗಾರ, ಸ್ಥಳೀಯ ಅಧ್ಯಾಪಕ ಸಂಘದ ಅಧ್ಯಕ್ಷ ತಿಪ್ಪಾರೆಡ್ಡಿ, ಕಾರ್ಯದರ್ಶಿ ಗಿರಿಸ್ವಾಮಿ, ಮತದಾರರ ಸಾಕ್ಷರಾತಾ ಕ್ಲಬ್ ಸಂಚಾಲಕ ಪ್ರೊ.ನಟರಾಜ್, ಐ.ಕ್ಯೂ.ಎ.ಸಿ ಸಂಚಾಲಕ ಪ್ರೊ.ವೀರೇಶ್ ಹಾಗೂ ಪ್ರೊ.ಗೌರಮ್ಮ, ಶಾಮಲಾ, ಶಶಿಕಲಾ.ಜಿ.ಟಿ ಮತ್ತು ಕಾಲೇಜಿನ ಬೋದಕ/ಕೇತರ ಸಿಬ್ಬಂದಿಯವರು ಅಭಿನಂದಿಸಿದರು