ಪ್ರಪಂಚ ಕಂಡ ಅತ್ಯದ್ಭುತ ವಿಜ್ಞಾನಿ ಡಾ.ಎ.ಪಿ.ಜೆ

????????????????????????????????????

ಕಲಬುರಗಿ.ಜು.27: ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ಪ್ರಪಂಚ ಕಂಡ ಅತ್ಯದ್ಭುತ ವಿಜ್ಞಾನಿಗಳಲ್ಲಿ ಒಬ್ಬರು. ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಅವರು ದೇಶಕ್ಕೆ ಸಲ್ಲಿಸಿದ ಸೇವೆ ಅನನ್ಯ ಎಂದು ಉಪಪ್ರಾಚಾರ್ಯ ಪ್ರಸಾದ್.ಜಿ.ಕೆ ಹೇಳಿದರು.
ನಗರದ ರಾಮ ಮಂದಿರದ ಹತ್ತಿರವಿರುವ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಡಾ.ಎ.ಪಿ.ಜೆಅಬ್ದುಲ್ ಕಲಾಂ ಅವರ ಪುಣ್ಯತಿಥಿಯನ್ನು ಆಚರಿಸಲಾಯಿತು ಕಾಯ್ರಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಸಾದ ಜಿ.ಕೆ. ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮಾತನಾಡಿದರು.
ಅಣ್ವಸ್ತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ಇಡೀ ವಿಶ್ವಕ್ಕೆ ಭಾರತದ ವೈಜ್ಞಾನಿಕ ಶಕ್ತಿಯೆನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ತತ್ವಜ್ಞಾನಿಯಾಗಿ ಜೀವನದ ಯಶಸ್ಸಿನ ಸೂತ್ರಗಳನ್ನು ತಿಳಿಸಿ, ವಿದ್ಯಾರ್ಥಿಗಳ ಪ್ರೀತಿಯ ರಾಷ್ಟ್ರಪತಿಯೆಂಬ ಖ್ಯಾತಿ ಪಡೆದಿದ್ದರು. ಶಿಕ್ಷಕ ವೃತ್ತಿಯನ್ನು ಅಪಾರವಾಗಿ ಪ್ರೀತಿಸಿದ ಡಾ.ಎ.ಪಿ.ಜೆ ಜೀವನದ ಕೊನೆಯ ಉಸಿರಿರುವರೆಗೂ ವಿದ್ಯಾರ್ಥಿಗಳಿಗೆ ಪಾಠ ಮಾಡಿ, ಮಾದರಿ ಜೀವನ ನಡೆಸಿದರು. ಅವರ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಪ್ರಸಾದ್ ಸಲಹೆ ನೀಡಿದರು.
ಕಾರ್ಯಕ್ರಮದ ಕೊನೆಗೆ ಪ್ರೌಢಶಾಲಾ ಮಕ್ಕಳಿಗೆ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆಯನ್ನೊಳಗೊಂಡ ಕಿರು ಚಲನಚಿತ್ರವನ್ನು ತೋರಿಸಲಾಯಿತು.
ವಿದ್ಯಾರ್ಥಿಗಳಾದ ಸಹನಾ, ಪ್ರಭುದೇವ, ಸೂರ್ಯಮಿತ್ರ ಹಾಗೂ ಶಿಕ್ಷಕ ಸಂಜೀವಕುಮಾರ ಡಾ. ಎ.ಪಿ.ಜೆ.ಅವರ ಸಾಧನೆ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಶೋಭಾ, ಭೀಮಾಶಂಕರ, ಅಂಬಿಕಾ, ಶ್ರೀಪಾದ ಹಾಗೂ ಆನಂದ ಉಪಸ್ಥಿತರಿದ್ದರು.