ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ

ಕಲಬುರಗಿ:ಸೆ.19:ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 72ನೇ ಜನ್ಮದಿನದ ಅಂಗವಾಗಿ ಕಲಬುರ್ಗಿ ನಗರ ಜಿಲ್ಲೆ ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ ನಗರದ ಮಾಯಾ ಮಂದಿರ ದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಮೋದ ಧುಮಾಳೆ, ಉತ್ತರ ಮಂಡಲ ಅಧ್ಯಕ್ಷ ಶ್ರೀ ವಿಜಯ ಕುಮಾರ ಮಡಿವಾಳ, ಸಾಮಾಜಿಕ ಜಾಲತಾಣ ಸಂಚಾಲಕ ಚಂದ್ರಕಾಂತ ಕೋಂಡಾಪೂರೆ, ಶ್ರೀ ಶರಣಬಸಪ್ಪ ಶೇಟಗಾರ, ರಕ್ತದಾನ ಮಾಡಿದರು ನಗರ ಜಿಲ್ಲಾಧ್ಯಕ್ಷ ಅರವಿಂದ ಪೆÇೀದ್ದಾರ ವಿಶ್ವಕರ್ಮ, ಪ್ರವೀಣ ಶೇಠ ಜೈನ, ಅಶೋಕ ಇಂಗೋಳೆ, ಹಣಮಂತ ಪೂಜಾರಿ, ಜಗದೀಶ ವರ್ಮಾ,ಜಯಪ್ಪ ಬಡಿಗೇರ, ಕಿಶೋರ ಚವ್ಹಾಣ, ಜಗದೀಶ ಉದನೂರ ಉಪಸ್ಥಿತರಿದ್ದರು. ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ದಾನಿಗಳು ರಕ್ತದಾನ ಮಾಡಿದರು.