ಪ್ರಧಾನ ಮಂತ್ರಿ ಜನ್ಮದಿನ : ಸೇವಾ ಸಪ್ತಾಹ ಕಾರ್ಯಕ್ರಮ

ರಾಯಚೂರು.ಸೆ.16- ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಸೇವಾ ಹೀ ಸಂಘಟನೆ ಎಂಬ ಪರಿಕಲ್ಪನೆಯಲ್ಲಿ ನಿನ್ನೆಯಿಂದ ಅ.2 ವರೆಗೆ ಸೇವಾ ಸಪ್ತಾಹ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆಂದು ಬಿಜೆಪಿ ಮುಖಂಡರಾದ ಶಿವಬಸಪ್ಪ ಮಾಲಿ ಪಾಟೀಲ್ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 70 ನೇ ವರ್ಷದ ಜನ್ಮದಿನದ ಅಂಗವಾಗಿ ಜಿಲ್ಲೆಯಲ್ಲಿ ನಿನ್ನೆಯಿಂದ ಅ.2 ರ ಮಹಾತ್ಮಾ ಗಾಂಧಿ ಜಯಂತಿಯವೆರೆಗು ಸೇವಾ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜಿಲ್ಲೆಯಲ್ಲಿ ನಿನ್ನೆಯಿಂದ ಪ್ರಾರಂಭಿಸಲಾಗಿದೆ. ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ ನಡ್ಡಾರ್ ಅವರು ನಿರ್ದೇಶನದಂತೆ ಸೆ.14 ರಿಂದ ಸೆ.20 ರವೆರೆಗೆ ನಡೆಯಲಿರುವ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟುಹಬ್ಬದ ಅಂಗವಾಗಿ ಪ್ರತಿ ಮಂಡಲಗಳಲ್ಲಿ 70 ಜನ ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಅಂಗ ಜೋಡಣೆ ಉಪಕರಣಗಳನ್ನು ವಿತರಿಸುವುದು. 70 ಜನ ಬಡವರಿಗೆ ಉಚಿತ ಕನ್ನಡಕ ನೀಡುವುದು, ಪ್ರತಿ ಜಿಲ್ಲೆಯ 70 ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವುದು, ಕೊರೊನಾ ಪೀಡಿತ 70 ಜನ ವ್ಯಕ್ತಿಗಳಿಗೆ ಪ್ಲಾಸ್ಮ ದಾನ ಮಾಡುವುದು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸೆ.25 ರಂದು ನಡೆಯಲಿರುವ ಪಂಡಿತ ದೀನದಯಾಳ್ ಅವರು ಜಯಂತಿ ಅಂಗವಾಗಿ ಪ್ರತಿ ಬೂತ್‌ಗಳಲ್ಲಿ ಅವರು ಪ್ರತಿಗಳಿಗೆ ಮಾರ್ಲಾಪಣೆ ಮಾಡುವುದು, ಅವರ ಜೀವನ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಸಲಾಗುವುದು ಹಾಗೂ ಅ.2 ರಂದು ನ‌ಡೆಯಲಿರುವ ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಕಳೆದ ವರ್ಷ ಗಾಂಧಿ ಸಂಕಲ್ಪ ಯಾತ್ರೆ ಯೋಜನೆಯನ್ನು ಮಾಡಲಾಗಿತ್ತು.
ಈ ಬಾರೀ ಪ್ರಧಾನ ಮಂತ್ರಿಗಳು ದೇಶಕ್ಕೆ ನೀಡಿದ ಆತ್ಮನಿರ್ಭರ ಭಾರತದ ಸಂಕಲ್ಪವನ್ನು ವಿವಿಧ ಪ್ರಕಾರ ಸಂವಾದ ಕಾರ್ಯಕ್ರಮಗಳ ಮೂಲಕ ಯೋಜನೆಯನ್ನು ಮಾಡಲಾಯಿತು ಹಾಗೂ 20 ಲಕ್ಷ ಕೋಟಿ ಆತ್ಮನಿರ್ಭರ ಪ್ಯಾಕೇಜಿನ ವಿವಿಧ ಯೋಜನೆಗಳನ್ನು ಬೂತ್‌ಗಳಲ್ಲಿ ಪ್ರಚಾರ ಮಾಡುವುದು. ಈ ಪ್ಯಾಕೇಜಿಗೆ ಸಂಬಂಧಿಸಿದಂತೆ ಮನೆ ಮನೆಗಳಿಗೆ ತಲುಪುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಎಂ.ಪಾಟೀಲ್, ಕಡಗೋಳ ರಾಮಚಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.