ಪ್ರಧಾನ ಮಂತ್ರಿಯವರು ರೈತರ ಖಾತೆಗೆ ನೇರವಾಗಿ ಜಮಾ ಶ್ಲಾಘನೀಯಃ ಡಾ.ಆರ್.ಬಿ.ಬೆಳ್ಳಿ

ವಿಜಯಪುರ, ಡಿ.26-ಕೃಷಿ ವಿಜ್ಞಾನ ಕೇಂದ್ರ ವಿಜಯಪುರದಲ್ಲಿ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೃಷಿ ವಿಸ್ತರಣಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕರಾದ ಡಾ.ಆರ್.ಬಿ.ಬೆಳ್ಳಿ ಇವರು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು 9 ಕೋಟಿ ರೈತರಿಗೆ 18 ಸಾವಿರ ಕೋಟಿ ನಿಧಿಯನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಿ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವದು ಶ್ಲಾಘನೀಯ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥೆ ಡಾ. ಶುಭಾ. ಎಸ್. ಇವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಪೂರ್ಣ ಮಾಹಿತಿಯನ್ನು ರೈತರಿಗೆ ಸವಿಸ್ತಾರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಈ ಯೋಜನೆಯ ನೇರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಾ.ಸಂಗೀತಾ ಜಾಧವ, ಡಾ.ವಿವೇಕ ದೇವರನಾವದಗಿ, ಮಲ್ಲಪ್ಪ ಬಿ. ಹಾಗೂ ಎಸ್.ಸಿ. ಬಡಿಗೇರ ಉಪಸ್ಥತಿತರಿದ್ದರು. ಬಿ.ಸಿ. ಕೋಲ್ಹಾರ ಇವರು ಸ್ವಾಗತಿಸಿದರು, ಶ್ರೀಶೈಲ ರಾಠೋಡ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 53 ಜನ ರೈತರು ಪ್ರತ್ಯಕ್ಷವಾಗಿ ಭಾಗವಹಿಸಿದ್ದರು ಹಾಗೂ ಆನ್‍ಲೈನ್ ಮೂಲಕ ನೊಂದಣಿಮಾಡಿದ ಸುಮಾರು 300 ರೈತರು ಕಾರ್ಯಕ್ರಮ ವೀಕ್ಷಿಸಿದರು.