ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ:ಗಡ್ಕರಿ

ಮುಂಬೈ,ಮಾ.೧೭-ಲೋಕಸಭೆ ಚುನಾವಣೆಯ ಬಳಿಕ ತಾವು ಪ್ರಧಾನಿ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಬಿಜೆಪಿ ಮಾಜಿ ಅಧ್ಯಕ್ಷ ಹಾಗು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟ ಪಡಿಸಿದ್ದಾರೆ.ನಾನು ವೃತ್ತಿಪರ ರಾಜಕಾರಣಿಯಲ್ಲ. ತಳಮಟ್ಟದ ಕಾರ್ಯಕರ್ತ. ಮುಂದಿನ ದಿನಗಳಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರಾಗಿ ಮುಂದುವರಿಯಲು ಬಯಸುವುದಾಗಿ ಅವರು ತಿಳಿಸಿದ್ದಾರೆಖಾಸಗಿ ಸುದ್ದಿಸಂಸ್ಥೆಯೊಂದಿಗೆ ನೀಡಿದ ಸಂದರ್ಶನದಲ್ಲಿ ಅವರು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗಿನ ಭಿನ್ನಾಭಿಪ್ರಾಯ, ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ತಾವು ಅಂತಹ ಯಾವುದೇ ಭಿನ್ನಾಭಿಪ್ರಾಯ ಹೊಂದಿಲ್ಲ ಎಂದಿದ್ಧಾರೆ.ಗುಜರಾತಿನ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡಿದ್ದರು ಮತ್ತು ಅವರನ್ನು ಪ್ರಧಾನಿಯಾಗಿ ಬಿಂಬಿಸಿದ್ದು ೨೦೧೪ರ ಚುನಾವಣೆಯಲ್ಲಿ ನಮಗೆ ಗೆಲುವಿಗೆ ನೆರವಾಯಿತು. ೨೦೧೯ರಲ್ಲಿ, ಮತ್ತೊಂದು ವಿಜಯ ಖಚಿತಪಡಿಸಿಕೊಳ್ಳಲು ಅಭಿವೃದ್ಧಿಯ ಹಿಂದೆ ಹೋಗಿದ್ದೆವು ಎಂದಿದ್ದಾರೆಹತ್ತು ವರ್ಷಗಳ ಹಿಂದೆ ಬಿಜೆಪಿ ಏನು ಸಾಧಿಸಿದೆ ಎಂದು ನಾವು ಹೇಳಬಹುದು, ಕಳೆದ ೬೦-೬೫ ವರ್ಷಗಳಲ್ಲಿ ಕಾಂಗ್ರೆಸ್ ಮಾಡಲು ವಿಫಲವಾಗಿರುವುದನ್ನು ನಾವು ಮಾಡಿ ತೋರಿಸಿದ್ದೇವೆ. ಜನರು ಮೋದಿ ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದಾರೆ ಮತ್ತು ಮತ್ತೊಮ್ಮೆ ದಾಖಲೆಯ ಅಂತರದಿಂದ ನಮ್ಮನ್ನು ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಈ ಭಾರಿ ಬಿಜೆಪಿ ನೇತೃತ್ವದ ಎನ್ ಡಿಎ ಖಂಡಿತವಾಗಿಯೂ ೪೦೦ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದಿದ್ದಾರೆರಾಮಮಂದಿರ ವಿಚಾರವನ್ನು ರಾಜಕೀಯಗೊಳಿಸಬಾರದು.ಇದು ನಂಬಿಕೆಯ ಪ್ರಶ್ನೆಯಾಗಿದೆ ಮತ್ತು ಜನರು ತಮ್ಮ ಕನಸು ನನಸಾಗಿದೆ ಎಂದು ಸಂತೋಷಪಟ್ಟಿದ್ದಾರೆ. ಜಾತಿ, ಮತ, ಧರ್ಮ ಹೊರತು ಪಡಿಸಿ ಎಲ್ಲರೂ ಇಷ್ಟಪಟ್ಟಿದ್ದಾರೆ. ಈ ವಿಷಯದಲ್ಲಿ ರಾಜಕಾರಣ ಮಾಡುವುದು ನನಗೆ ನಂಬಿಕೆ ಇಲ್ಲ. ಸುದೀರ್ಘ ಕಾನೂನು ಹೋರಾಟ ಮತ್ತು ಜನರ ಹೋರಾಟದ ನಂತರ ಸುಪ್ರೀಂ ಕೋರ್ಟ್ ತೀರ್ಪು ಬಳಿಕ ರಾಮಮಂದಿರ ಉದ್ಘಾಟನೆಯಾಗಿದೆ ಎಂದಿದ್ಧಾರೆ೨೦೨೨ ರಲ್ಲಿ ಬಿಜೆಪಿಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯಿಂದ ನಿಮ್ಮನ್ನು ತೆಗೆದುಹಾಕಲಾಯಿತು ಮತ್ತು ಫಡ್ನವೀಸ್ ಅವರನ್ನು ಸೇರ್ಪಡೆಗೊಳಿಸಲಾಯಿತು. ನೀವು ಪ್ರಧಾನಿಯಿಂದ ಹೊರಗುಳಿದಿದ್ದಾರೆ ಎಂದು ಭಾವಿಸಿದ್ದೀರಾ ಎನ್ನುವ ಪ್ರಶ್ನೆಗೆ ವೃತ್ತಿಯಲ್ಲ ರಾಜಕಾರಣಿ ಅಲ್ಲ. ರಾಜಕೀಯ ಸಾಮಾಜಿಕ-ಆರ್ಥಿಕ ಸುಧಾರಣೆಗಳಿಗೆ ಒಂದು ಸಾಧನ ಎಂದು ನಂಬಿದವನು ಎಂದಿದ್ದಾರೆ