
ಬೀದರ್:ಆ.7: ದೇಶದ ಎಲ್ಲ ರಾಜ್ಯಗಳಲ್ಲಿ ಗ್ಯಾರಂಟಿ ಜಾರಿಗೆ ತರಲಿ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಸವಾಲ್ ಗೆ ಕೇಂದ್ರ ಸಚಿವ ಭಗವಂತ್ ಖೂಬಾ ತೀರುಗೇಟು ನೀಡಿದ್ದಾರೆ. ಇಂತಹ ಮೂರ್ಖತನದ ಹೇಳಿಕೆ ನೀಡೋದನ್ನು ನಿಲ್ಲಿಸಬೇಕು ಎಂದಿದ್ದಾರೆ.
ನಗರದಲ್ಲಿ ರವಿವಾರ ಸುದ್ದಿಗಾರರ ಜತೆ ಮಾತನಾಡಿ, ಗ್ಯಾರೆಂಟಿಗಳ ಮೂಲಕ ಜನರಿಗೆ ಹೇಗೆ ಮೋಸ ಮಾಡಿದ್ದೀರಿ, ಅವರಿಗೆ ನಿಮ್ಮ ಯೋಗ್ಯತೆ ಏನೆಂದು ಗೋತ್ತಿದೆ.
ಈ ಐದು ಗ್ಯಾರೆಂಟಿಗಳು ಕೇವಲ ಲೋಕಸಭಾ ಚುನಾವಣೆಯ ವರೆಗೆ ಮಾತ್ರ. ಗ್ಯಾರಂಟಿ ನಾಟಕದ ಬಗ್ಗೆ ಜನರು ಮನಗಡಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ದರ್ಪದ ಮಾತುಗಳನ್ನು ನಿಲ್ಲಸಿಬೇಕು ಎಂದು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಶಿವಕುಮಾರ ನಡುವೆ ರಾಜಕೀಯ ದ್ವೇಷ ಇದೆ. ಇಬ್ಬರ ಹುಳುಕು ಅವರವರಿಗೆ ಗೋತ್ತಿದೆ. ಇಬ್ಬರು ಕರ್ನಾಟಕದ ಜನರಿಗೆ ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಖೂಬಾ, ಪೇನ್ ಡ್ರೈವ್ ವಿಚಾರ ಎಚ್.ಡಿಕೆ ಬ್ಲ್ಯಾಕ್ ಮೇಲ್ ಮಾಡುವ ತಂತ್ರವಾಗಿದೆ. ಅವರ ರಾಜಕೀಯ ಪ್ರತಿಯೊಬ್ಬ ಪ್ರಜೆಗೂ ಗೊತ್ತಿದೆ. ಮಾತನಾಡೋದು ಒಂದು ಆಟವಾಡೋದು ಒಂದು ಎಂದು ಹೇಳಿದರು.