ಪ್ರಧಾನಿ ಮೋದಿ ಬಂಡೀಪುರ ಭೇಟಿ ಕಾರ್ಯಕ್ರಮ ಮುಕ್ತಾಯ

ಚಾಮರಾಜನಗರ, ಏ.10:-ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸಫಾರಿ ಹಾಗೂ ತಮಿಳುನಾಡಿನ ತೆಪ್ಪಕಾಡಿನ ಆನೆ ಶಿಬಿರದ ಪ್ರಧಾನಿ ಮೋದಿ ಭೇಟಿ ಕಾರ್ಯಕ್ರಮ ಮುಕ್ತಾಯಗೊಂಡಿದೆ.
ಹುಲಿ ಯೋಜನೆಯ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿಕೊಟ್ಟಿದ್ದರು. ಓಪನ್ ಜೀಪ್‍ನಲ್ಲಿ ಅವರು ವನ್ಯಜೀವಿ ಸಫಾರಿ ನಡೆಸಿದರು. ಟೋಪಿ, ಗಾಗಲ್ಸ್ ಜೊತೆಗೆ ಕ್ಯಾಮರಾ ಹಿಡಿದು ಸಫಾರಿ ದಿರಿಸಿನಲ್ಲಿ ಕಾಡಿಗೆ ಮೋದಿ ಸಂಚರಿಸಿ ವನ್ಯಜೀವಿಗಳು, ಪ್ರಕೃತಿ, ಪರಿಸರ ಮತ್ತು ವನ್ಯಜೀವಿ ಸಂಪತ್ತಿನ ಸೌಂದರ್ಯ ಕಣ್ಣುತುಂಬಿಕೊಂಡರು. ಪ್ರಧಾನಿ ಮೋದಿ ಸಫಾರಿ ವಾಹನದೊಂದಿಗೆ ಒಟ್ಟು ಒಂಭತ್ತು ವಾಹನಗಳು ಜೊತೆಗೆ ಸಾಗಿದವು.
ಬಂಡೀಪುರದಲ್ಲಿ ಸಫಾರಿ ಬಳಿಕ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ತೆಪ್ಪ ಕಾಡಿನ ಆನೆ ಶಿಬಿರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು. ಈ ವೇಳೆ ಆನೆ ಶಿಬಿರದಲ್ಲಿ ವಿಹರಿಸಿ ಗಜಪಡೆಗೆಕಬ್ಬು ತಿನ್ನಿಸಿದ ಮೋದಿ, ಟಿ23 ಹುಲಿ ಸೆರೆ ಹಿಡಿದ ಮೂವರು ಸಿಬ್ಬಂದಿ ಮತ್ತು ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಯನ್ನೂ ಗೌರವಿಸಿದರು. ಇದೇ ಸಂದರ್ಭದಲ್ಲಿ ಆಸ್ಕರ್ ವಿಜೇತ ‘ದ ಎಲಿಫೆಂಟ್ ವಿಸ್ಪರರ್ಸ್’ ಚಿತ್ರದ ಮುಖ್ಯ ಪಾತ್ರಧಾರಿಗಳಾದ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಮೋದಿ ಭೇಟಿ ಮಾಡಿದರು. ಬೊಮ್ಮ – ಬೆಳ್ಳಿ ದಂಪತಿಯೊಂದಿಗೆಗಜಪಡೆ ಹತ್ತಿರಕ್ಕೆ ಬಂದು ಪ್ರಧಾನಿ ಆನೆಗಳನ್ನು ಸ್ಪರ್ಶಿಸಿದರು.
ಇನ್ನು, ಪ್ರಧಾನಿ ಅವರನ್ನು ನೀಡಲುರಸ್ತೆ ಮಾರ್ಗದಲ್ಲಿ ಸುತ್ತ-ಮುತ್ತಲಿನ ಗ್ರಾಮಸ್ಥರು ಸೇರಿದ್ದರು. ಆಗ ನೆರೆದಿದ್ದ ಜನಸ್ತೋಮ ದತ್ತ ಕೈ ಬೀಸಿದ ಮೋದಿ ಅಲ್ಲಿಂದ ಹೆಲಿಪ್ಯಾಡ್‍ಗೆ ಆಗಮಿಸಿದರು.