ಪ್ರಧಾನಿ ಮೋದಿ ಜನ್ಮದಿನ: ಯುವಕರಿಂದ ರಕ್ತದಾನ

ಬೀದರ್,ಸೆ.22-ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ವತಿಯಿಂದ ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಮಠಾಣಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಪಾಕ್ಷಿಕ ಕಾರ್ಯಕ್ರಮದ ಭಾಗವಾಗಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಸುಮಾರು ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ರಕ್ತದಾನ ಮಾಡುವುದು ಶ್ರೇಷ್ಠ ದಾನವಾಗಿದೆ, ರಕ್ತದಾನ ಮಾಡುವುದರಿಂದ ನಾವು ಪರೋಕ್ಷವಾಗಿ ಸಮಸ್ಯೆಯಲ್ಲಿರುವ ಜನರಿಗೆ ಸಹಾಯವಾಗುತ್ತದೆ. ರಕ್ತದಾನ ಮಾಡುವುದರಿಂದ ಒಬ್ಬರ ಪ್ರಾಣವನ್ನು ಉಳಿಸುವ ಪುಣ್ಯದ ಕೆಲಸ ಮಾಡಿದಂತೆ ಆಗುತ್ತೆ, ಹಾಗಾಗಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಟಿಎಚ್ ಓ ಸಂಗಾರೆಡ್ಡಿ, ಡಾ. ರೇಣುಕಾ ಜಾಧವ, ಬಿಜೆಪಿ ಮಂಡಲದ ಅಧ್ಯಕ್ಷರಾದ ರಾಜ ರೆಡ್ಡಿ ಶಾಬಾದ, ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಯ್ಯ ಸ್ವಾಮಿ, ಚನ್ನಪ್ಪ ಗೌರಶೆಟ್ಟಿ , ಸುರೇಶ್ ಮಾಶೆಟ್ಟಿ, ಶಿವಕುಮಾರ ಸ್ವಾಮಿ, ನಾಗಭೂಷಣ ಕಮಠಾಣಾ, ಬಸವರಾಜ ಸಿಂದಬಂದಗಿ, ಅನೀಲ ಗುನ್ನಳ್ಳಿ, ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಪಾಟೀಲ, ಹೇಮಾ ತುಕ್ಕಾರೆಡ್ಡಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ, ಪ್ರಧಾನ ಕಾರ್ಯದರ್ಶಿ ಜನಾರ್ದನ ರೆಡ್ಡಿ, ಬೀದರ ದಕ್ಷಿಣ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸಾಯಿನಾಥ ಪಾಟೀಲ , ಅಮರ ಚಾಂಬಳೆ, ಅರವಿಂದ ಬುಳ್ಳಾ, ಭಾಸ್ಕರ್ ರೆಡ್ಡಿ, ಗುರು ಪಾಂಪಡೆ, ಶಿವು ಸುಲ್ತಾನಪುರ, ಇನ್ನೂ ಅನೇಕರು ಉಪಸ್ಥಿತರಿದ್ದರು.