ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿವಿವಿಎನ್ ವಿದ್ಯಾರ್ಥಿಗಳಿಂದ ನಾಡ ಗೀತೆ

ಕಲಬುರಗಿ:ಜ.19:ಸೇಡಂ ತಾಲೂಕಿನ ಮಳಖೇಡದಲ್ಲಿ ಜರುಗಿದ ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಮಕ್ಕಳು ನಾಡ ಗೀತೆ ಪ್ರಸ್ತುತ ಪಡಿಸಿದರು.
ಭಾಗವಹಿಸಿದ ವಿದ್ಯಾರ್ಥಿಗಳು ಶ್ವೇತಾ ಶ್ರೀನಾಥ, ಅನುಷ್ಕ ಸಂತೋಷ, ಅನ್ನಪೂರ್ಣ ಶರಬಣ್ಣ, ಲಾವಣ್ಯ ಗೌರಿಶಂಕರ್, ಶ್ರದ್ಧಾ ಸೋಮನಾಥ, ದೀಪಿಕಾ ಚಂದ್ರಕಾಂತ, ಸ್ಪೂರ್ತಿ ಜಯಪ್ರಕಾಶ, ತನವಿ ಅಶೋಕ, ಪ್ರೇರಣಾ ರುದ್ರಪ್ಪ, ಸಹಾನವಿ ರಾಜೇಂದ್ರ, ತೇಜಶ್ರೀ ಕಾಶಿನಾಥ, ಯಶಪ್ರದಾ ವಿಜಯಕುಮಾರ, ಭೂಮಿಕಾ ಚಂದ್ರಕಾಂತ, ಸುರಭಿ ಸುಧೀರ, ಮಂಜುಶ್ರಿ ವಿಜಯಕುಮಾರ, ಪ್ರೇರಣಾ ಗುರುರಾಜ, ಆದರ್ಶ ಅಶೋಕ, ಸಾಯಿಪ್ರಸಾದ ಮಹೇಶ ಭಾಗವಹಿಸಿದ್ದರು.
ಹಾರ್ಮೋನಿಯಂ – ಸುಮಾ ಭಗವತಿ, ತಬಲಾ – ಶ್ರೀಕಾಂತ ಮಾನೆ, ಸಂಗೀತ ನಿರ್ದೇಶನ – ಮಲ್ಲಿಕಾರ್ಜುನ ಜವಳಗಿ.
ಮಕ್ಕಳ ಈ ಸಾಧನೆಗೆ ವಿವೇಕಾನಂದ ವಿದ್ಯಾ ನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ, ಶಾಲೆಯ ಪ್ರಾಚಾರ್ಯ, ಶಿಕ್ಷಕರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.