ಪ್ರಧಾನಿ ಮೋದಿರಿಂದ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಆರೋಗ್ಯ ವಿಚಾರಣೆ

ಬೆಂಗಳೂರು.ಮಾ೩೧: ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇಂತಹ ದೇವೇಗೌಡ ದಂಪತಿಗಳಿಗೆ ಕರೆ ಮಾಡಿರುವಂತ ಪ್ರಧಾನಿ ನರೇಂದ್ರ ಮೋದಿಯವರು ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ನಿಮ್ಮ ‘ಪ್ಯಾನ್ ಸಂಖ್ಯೆ’ಗೆ ‘ಆಧಾರ್ ಸಂಖ್ಯೆ ಲಿಂಕ್’ಗೆ ಇಂದೇ ಕೊನೆ : ತಪ್ಪಿದಲ್ಲಿ ನಾಳೆ ‘೧ ಸಾವಿರ ದಂಡ’ ಫಿಕ್ಸ್, ಲಿಂಕ್ ಮಾಡೋದು ಹೇಗೆ ಇಲ್ಲಿದೆ ಮಾಹಿತಿಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ಸೋಂಕಿತರಾದಂತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಅವರ ದಂಪತಿಗಳೊಂದಿಗೆ ಮಾತನಾಡಿದೆ. ಅವರ ಆರೋಗ್ಯವನ್ನು ವಿಚಾರಿಸಿದೆ. ಬಹು ಬೇಗ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಇನ್ನೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕೂಡ, ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ತಮ್ಮ ಹಾಗೂ ಪತ್ನಿಯ ಆರೋಗ್ಯವನ್ನು ವಿಚಾರಿಸಿದ್ದಾರೆ. ನೀವು ಬಯಸಿದ್ದಲ್ಲಿ ನೀವು ಆಯ್ಕೆ ಮಾಡಿದಂತ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡೋದಕ್ಕೆ ವ್ಯವಸ್ಥೆ ಮಾಡುವುದಾಗಿಯೂ ತಿಳಿಸಿದ್ದಾರೆ. ನಾನು ಬೆಂಗಳೂರು ಹೊರತಾಗಿ ಬೇರೆಡೆ ಚಿಕಿತ್ಸೆ ಪಡೆಯೋದಿಲ್ಲ. ಈ ಬಗ್ಗೆ ಅವರಿಗೆ ಮಾಹಿತಿ ನೀಡಿರುವುದಾಗಿ ಟ್ವಿಟ್ ನಲ್ಲಿ ತಿಳಿಸಿದ್ದಾರೆ.