ಪ್ರಧಾನಿ ಮೋದಿಯಿಂದ ದೇಶ ಪ್ರಗತಿಯತ್ತ


ಸಂಜೆವಾಣಿ ವಾರ್ತೆ
ಸಂಡೂರು :ಫೆ:22:  ಜಗತ್ತಿನಲ್ಲಿ ರಾಮಾಯಣ ಮಹಾಭಾರವನ್ನು ಹಲವಾರು ಬಾರಿ ಕೇಳಿ ಅನಂದಿಸುತ್ತೇವೆ, ಅದೇ ರೀತಿ ಮೋದಿಯವರ ಸಾಧನೆಯನ್ನು ಮತ್ತೋಮ್ಮೆ ಕೇಳಿ ಅನಂದಿಸಬೇಕು, ಕಾರಣ ಅವರ ಸಾಧನೆ ಭಾರತ 5ನೇ ಸ್ಥಾನಕ್ಕೆ ಏರಿದ್ದನ್ನು ನೋಡಬೇಕು ಎಂದು ಚಕ್ರವರ್ತಿಸೂಲಿಬೇಲಿ ತಿಳಿಸಿದರು.
ಪಟ್ಟಣದ ನಮೋ ಯುವಬ್ರೀಗೇಡ್ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸವನ್ನು ಚಕ್ರವತಿಸೂಲಿಬೇಲಿ ನಡೆಸಿಕೊಟ್ಟರು, ಅವರು ಮಾತನಾಡಿ ಕೆಲಸದಲ್ಲಿ ಹುಚ್ಚು ಇರುವ ವ್ಯಕ್ತಿ ಅಪರೂಪ ಅಂತಹ ಸಾಧಕ ಮೋದಿಯಾಗಿದ್ದಾರೆ, ಕಾಂಗ್ರೇಸ್ ಪಕ್ಷದಲ್ಲಿ ರಾಹೂಲ್ ಅವರನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ ಕಾರಣ ಅವರ ತಾತಾ, ಅಜ್ಜಿ, ತಂದೆ ಪ್ರಧಾನಿಯಾಗಿದ್ದರೂ ಎನ್ನುವ ಕಾರಣಕ್ಕೆ, ಅವರಿಗೆ ಯಾವುದೇ ಅರ್ಹತೆ ಇಲ್ಲ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರು. ಬೇರೆ ಪಕ್ಷದವರ ಬಗ್ಗೆ ಮಾತನಾಡಬೇಕೆಂದರೆ ಅವರ ಜಾತಿ ಹಿಡಿದು, ಅವರ ವಂಶವನ್ನು ಹಿಡಿದು ಮಾತನಾಡಬೇಕು, ಅದರೆ ಮೋದಿಯವರ ಬಗ್ಗೆ ಮಾತನಾಡಬೇಕಾದರೆ ಅವರ ಕೆಲಸದಿಂದ ಮಾತನಾಡಬೇಕು, ಎಂದೂ ಸಹ ಅವರ ಕುಟುಂಬದ ಸದಸ್ಯರನ್ನಾಗಲಿ, ತಂದೆ, ತಾಯಿಯನ್ನಾಗಲಿ, ಸಹೋದರರನ್ನಾಗಲಿ ಒಂದು ದಿನವೂ ಸಹ ಜಗತ್ತಿಗೆ ತಿಳಿಸಲಿಲ್ಲ, ಕಾರಣ ಅವರು ಇಡೀ ದೇಶವನ್ನು , ಜನತೆಯನ್ನು ತಮ್ಮ ಕುಟುಂಬವೆಂದು ಭಾವಿಸಿ ಕಾರ್ಯನಿರ್ವಹಿಸುತ್ತಿದ್ದಾರೆ, ಅದರೆ ವ್ಯಕ್ತಿಯ ಪಕ್ಷವಾದ ಕಾಂಗ್ರೇಸ್ ಕೇವಲ ವಂಶದ ಬಗ್ಗೆ ಮಾತ್ರ ಮಾತನಾಡುತ್ತಾರೆ, ಗ್ರೇಟ್ ಶಿಕ್ಷಣ ಸಚಿವರು ಅವರ ಅದೇಶಗಳ ಬಗ್ಗೆ ಪ್ರಶ್ನೆ ಮಾಡಿದರೆ ಕೇಸು ದಾಖಲಿಸುತ್ತಾರೆ, ಅಲ್ಲದೆ ಒಂದೇ ತಿಂಗಳಲ್ಲಿ 4 ಅದೇಶಗಳನ್ನು ಮಾಡಿದ ಕಾಂಗ್ರೇಸ್ ಸರ್ಕಾರ ಹಿಂಪಡೆಯುತ್ತದೆ ಅ ಎಲ್ಲಾ ಅದೇಶಗಳು ಸಹ ಬಹು ವಿಶೇಷ ಎಸ್.ಎಸ್.ಎಲ್. ವಿದ್ಯಾರ್ಥಿಗಳ ವೇಳಾ ಪಟ್ಟಿ ಸಾಕ್ಷಿಯಾಗಿದೆ, 10.15ಕ್ಕೆ ಸೋಮುವಾರ, ಮಂಗಳವಾರ, ಬುದವಾರ, ಗುರುವಾರ ಅದರೆ ಶುಕ್ತವಾರ ಮಾತ್ರ 2.15 ರಿಂದ ಮತ್ತೆ ಶನಿವಾಋ 10.15 ರಿಂದ ಪರೀಕ್ಷೆ ಇದು ಏಕೆ ಎಂದು ಪ್ರಶ್ನಿಸಿದರೆ ಗಲಭೆ ಮಾಡುತ್ತಾರೆ ಎಂದು ಕೇಸು ದಾಖಲಿಸುತ್ತಾರೆ ಸತ್ಯ ಕಹಿಯಾಗಿದೆ, ಅವರು ಒಪ್ಪಿಕೊಳ್ಳಬೇಕು ಮುಸ್ಲಿಂ ರನ್ನು ಓಲೈಸಲು ಎಂದು, ಇನ್ನೂ ತಾಜ್ ಹೋಟಲ್ ಮೇಲೆ, ಸಂಸತ್ ಮೇಲೆ ದಾಳಿ ಮಾಡಿದವರನ್ನು ಏನು ಮಾಡದ ಕಾಂಗ್ರೇಸ್ ಮೋದಿಯವರ ಬಗ್ಗೆ ಮಾತನಾಡುವ ಯೋಗ್ಯತೆ ಎಲ್ಲಿದೆ, ಪಾಕಿಸ್ತಾನ ಮಾಡಿದ ದಾಳಿಗೆ ಅವರ ದೇಶಕ್ಕೆ ಹೋಗಿ ಹೊಡೆದುರುಳಿಸಿದ ದೇಶವನ್ನು ಕಟ್ಟಿದ್ದಾರೆ, ಜಗತ್ತಿಗೆ ಔಷಧಿಕೊಟ್ಟು ರಕ್ಷಿಸಿದ ದೇಶವಾಗಿದೆ, ಅತಿ ದೊಡ್ಡ ರಾಷ್ಟ್ರೀಯ ಹೆದ್ದಾರಿ ಇರುವ ದೇಶವಾಗಿದೆ, ಒಂದೇ ಭಾರತ ರೈಲ್ವೆಯನ್ನು ತಂದು ಅಭಿವೃದ್ದಿ ಮಾಡಿದೆ, ಅತಿ ದೊಡ್ಡ ಡಬ್ಬಲ್ ಡೆಕ್ಕರ್ ಸೇತುವೆ ನಿರ್ಮಿಸಿದ್ದಾರೆ, ದೇಶದ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಪುನರುತ್ಥಾನ ಮಾಡಿದ್ದಾರೆ, ಅಲ್ಲದೆ ಶ್ರೀರಾಮನೇ ಸ್ವತ: ಮಂದಿರ ಕಟ್ಟಿಸಿಕೊಂಡು ರಾಮಲಲ್ಲಾನ ಉದ್ಘಾಟನೆಯನ್ನು ಮಾಡಿದ್ದಾರೆ, ಬರೀ ಮಂದಿರ ಕಟ್ಟಿಲ್ಲ, ಶೌಚ್ಚಾಲಯ ಕಟ್ಟಿದ್ದಾರೆ, ಮನೆಗಳನ್ನು ಕಟ್ಟಿದ್ದಾರೆ, ವಿಜ್ಞಾನವನ್ನು ಕಟ್ಟಿದ್ದಾರೆ, ದೇಶದ ಪ್ರಗತಿಯನ್ನು ಸಾಧಿಸಿದ್ದಾರೆ, ಇಂತಹ ಪ್ರಧಾನಿ ಮತ್ತೋಮ್ಮೆ ಗದ್ದುಗೆ ಹಿಡಿಯಲಿ ಅದಕ್ಕಾಗಿ ಕಮಲದ ಗುರುತಿಗೆ ಮತ ಹಾಕಿ ದೇಶ ಮಾರುವವರಿಗೆ ಅಲ್ಲ ಎಂದರು.
ಸರಸ್ವತಿ ಸಂಗೀತ ವಿದ್ಯಾಲಯದ ಸಹನ ಮತ್ತು ತಂಡದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ವರ್ಧಮಾನ ತ್ಯಾಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಡೂರು ಘಟಕದವರು ಚಕ್ರವರ್ತಿ ಸೂಲಿಬೇಲಿಯವರನ್ನು ಸನ್ಮಾನಿಸಿದರು.

One attachment • Scanned by Gmail