ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ

ತಾಳಿಕೋಟೆ:ಸೆ.18: ತಾಲೂಕಿನ ದೇವರಹಿಪ್ಪರಗಿ ಮತಕ್ಷೇತ್ರದ ಭಂಟನೂರ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಇವರ 72ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಭಂಟನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಪ್ರಧಾನಿ ನರೇಂದ್ರ ಮೋದಿಯವರು ದೇಶ ಕಂಡ ಒಬ್ಬ ಅಪ್ರತೀಮ ಧಿಮಂತ ನಾಯಕ ಭಾರತ ಅವರ ನಾಯಕತ್ವದಲ್ಲಿ ಜಗತ್ತಿನ ಒಂದು ಬಲಿಷ್ಟ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ, ಅವರ ಹುಟ್ಟು ಹಬ್ಬದ ಪ್ರಯುಕ್ತ ಪಕ್ಷವು ವಿವಿಧ ಸಮಾಜ ಸೇವಾ ಕಾರ್ಯಗಳನ್ನು ರಾಜ್ಯಾದ್ಯಾಂತ ಹಮ್ಮಿಕೊಂಡಿದೆ ಇಡೀ ವಿಶ್ವವೇ ಇಂದು ಭಾರತಕಡೆಗೆ ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ಮೋದಜಿ ಅವರು ನಡೆಸಿರುವ ಉತ್ತಮ ಆಡಳಿ ಕಾರ್ಯವೇ ಕಾರಣವಾಗಿ ಅಂತಹ ದೇವತಾ ಪುರುಷ ಮಹಾನ್ ವ್ಯಕ್ತಿಯ ಜನ್ಮದಿನದಂದು ನನ್ನ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ರಕ್ತದಾನ ಶಿಬಿರ ಆಯೋಜಿಸಿ ಯಶಸ್ವಿಗೆ ಮುಂದಾಗಿರುವದು ಸಂತಸ ಪಡುವಂತಾಗಿದೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ಇನ್ನಷ್ಟು ಗಟ್ಟಿಯಾಗಿ ನೆಲೆಯೂರಲಿ ಮೋದಿಜಿ ಅವರ ಕೊಡುಗೆ ದೇಶಕ್ಕೆ ಇನ್ನಷ್ಟು ಲಬಿಸಲಿ ಎಂದು ಆಶಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್ ಎಸ್ ಪಾಟೀಲ(ಕೂಚಬಾಳ) ಅವರು ಮಾತನಾಡಿ ನಾಡು ಕಂಡ ಅಪ್ರತಿಮ ದೇಶ ಸೇವಕ ನಮ್ಮಲ್ಲರ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಜನ್ಮ ದಿನ ಎಲ್ಲರು ಖುಷಿ ಪಡುವಂತಹದ್ದಾಗಿದೆ ದೇಶ ಸೇವೆಯೇ ನನ್ನ ಉಸಿರು ಎಂದು ತಿಳಿದು ದೇಶಕ್ಕಾಗಿ ದಿನದ 18 ಗಂಟೆಗಳ ಕಾಲ ಕೆಲಸ ಮಾಡುತ್ತಿರುವ ಮೋದಿಜಿ ಅವರು ನಮಗೆ ಸಿಕ್ಕಿರುವದು ನಮ್ಮೇಲ್ಲರ ಸುದೈವವಾಗಿದೆ ರಕ್ತದ ಕಣ ಕಣವನ್ನು ದಾನವನ್ನಾಗಿ ನೀಡುವದರೊಂದಿಗೆ ಅವರ ಮೇಲಿನ ಅಭಿಮಾನ ಪ್ರೀತಿಯನ್ನು ವ್ಯಕ್ತಪಡಿಸಿರುವ ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

 ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಮಂಡಲ ಅಧ್ಯಕ್ಷ ಬೀಮನಗೌಡ ಸಿದರಡ್ಡಿ, ಸಿದ್ದು ಬುಳ್ಳಾ, ಸಂಗನಗೌಡ ಹೆಗರಡ್ಡಿ, ಪ್ರಶಾಂತ ಹಾವರಗಿ, ಗುರುಗೌಡ ಗುರಡ್ಡಿ, ಮುತ್ತುಗೌಡ ಮಾಳಿ, ಶಿವನಗೌಡ ಗೊಟಖಂಡಕಿ, ಎಸ್.ಎಸ್.ಢವಳಗಿ, ತಾಲೂಕಾ ಆರೋಗ್ಯಾಧಿಕಾರಿ ಸತೀಶ ತಿವಾರಿ, ಪಿಡಬ್ಲುಡಿ ಅಧಿಕಾರಿ ಡಿ.ಬಿ.ಕಲ್ಬುರ್ಗಿ, ಭಂಟನೂರ ಪಿಡಿಓ ಎಸ್ ವಾಯ್ ದಳವಾಯಿ, ಮೊದಲಾದವರು ಉಪಸ್ಥಿತರಿದ್ದರು.