ಪ್ರಧಾನಿ ಮೋದಿಯವರ ಆಕ್ಷೇಪಾರ್ಹ ಭಾಷಣಕ್ಕೆ ಎಸ್‍ಯುಸಿಐ(ಸಿ) ಖಂಡನೆ

ಕಲಬುರಗಿ,ಏ.24-ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಬೇಕಾಗುತ್ತದೆ ಎಂಬರ್ಥದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಕೋಮು ಉದ್ವಿಗ್ನತೆ ಮತ್ತು ಹಿಂದೂ ಅಂಧಾಭಿಮಾನವನ್ನು ಪ್ರಚೋದಿಸುವ ಪ್ರಯತ್ನ ಮಾಡಿರುವುದನ್ನು ಎಸ್‍ಯುಸಿಐ (ಸಿ) ವಾಡಿ ಸ್ಥಳೀಯ ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ. ಉಗ್ರವಾಗಿ ಖಂಡಿಸಿದ್ದಾರೆ.
ಪ್ರಧಾನಮಂತ್ರಿ ಅವರ ಈ ಹೇಳಿಕೆಯು ಜ್ವಲಂತ ಜೀವನದ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಮತ್ತು ಕೋಮು ಧ್ರುವೀಕರಣವನ್ನು ಹುಟ್ಟುಹಾಕುವ ಪ್ರಯತ್ನವಾಗಿದೆ. ಇದು ಚುನಾವಣಾ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಚುನಾವಣಾ ಆಯೋಗÀ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.