ಪ್ರಧಾನಿ ಮೊದಿಯವರಿಗೆ ಅಭಿನಂದನಾ ಪತ್ರ ಪೋಸ್ಟ್ ಮಾಡಿದ ಬಿಜೆಪಿ ಕಾರ್ಯಕರ್ತರು

ದಾವಣಗೆರೆ. ಜು.೧೯; ಭಾರತದ ರಾಷ್ಟ್ರಪತಿ ಅಭ್ಯರ್ಥಿಯಾದ ಶ್ರೀಮತಿ ದ್ರೌಪದಿ ಮುರ್ಮು ಆಯ್ಕೆಯ ವಿಚಾರವಾಗಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್.ಡಿ.ಎ.)ಅಧಿಕೃತ ಅಭ್ಯರ್ಥಿಯಾಗಿ  ಬುಡಕಟ್ಟು ಜನಾಂಗದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ  ನರೇಂದ್ರ ಮೋದಿ ಯವರಿಗೆ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾಗೆ  ಸಿಎಂ ಬಸವರಾಜ್ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್ ಅವರಿಗೆ “ಅಭಿನಂದನಾ ಪತ್ರ. ” ವನ್ನು ದಾವಣಗೆರೆ ಜಿಲ್ಲಾಯಾಧ್ಯಂತ 1500 ಕ್ಕೂ ಹೆಚ್ಚು ಎಸ್.ಟಿ ಸಮುದಾಯದ ಪ್ರಮುಖರು, ಸಂಘ-ಸಂಸ್ಥೆಯವರು ಭಾರತೀಯ ಜನತಾ ಪಾರ್ಟಿಯ ಎಸ್.ಟಿ ಮೋರ್ಚಾದವರು ಪತ್ರವನ್ನು ಬರೆದು ಪೋಸ್ಟ್ ಹಾಕುವುದರ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು. ದಾವಣಗೆರೆ ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಕೃಷ್ಣಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜಗದೀಶ್, ಜಿಲ್ಲಾ ಉಪಾಧ್ಯಕ್ಷ ಮಂಜಾನಾಯ್ಕ್,  ಚಂದಪ್ಪ, ಮಾಧ್ಯಮ ಜಿಲ್ಲಾ ಸಂಚಾಲಕ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಮೋಹನ್ ಕೈದಾಳ ದೊಡ್ಡಘಟ್ಟ ಮಲ್ಲಿಕಾರ್ಜುನ, ಜಿಲ್ಲಾ ಸಾಮಾಜಿಕ ಜಾಲತಾಣ ರಮೇಶ್, ಮಾರುತಿ, ವಾಸು, ವೆಂಕಟೇಶ್, ಎಸ್ ಟಿ ಮೋರ್ಚಾದ ಉತ್ತರ ಮಂಡಲ ಅಧ್ಯಕ್ಷರಾದ ಶ್ರೀನಿವಾಸ್ ಗುಮ್ಮನೂರು, ರಂಗಸ್ವಾಮಿ, ಸುರೇಶ ಬಿ. ಸುರೇಶ ಎಸ್ ಹಾಗೂ ಜನಪ್ರತಿನಿದಿನಗಳು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.