ಪ್ರಧಾನಿ ಭೇಟಿ: 200ಕ್ಕೂ ಹೆಚ್ಚು ಸ್ವಯಂಸೇವಕರಿಂದ ಕಾರ್ಯನಿರ್ವಹಣೆ

ಸವದತ್ತಿ,: ಬೆಳಗಾವಿ ನಗರಕ್ಕೆ ಆಗಮಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಸವದತ್ತಿ ಮತಕ್ಷೇತ್ರದಿಂದ 20ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸ್ವಯಂ ಸ್ಪೂರ್ತಿಯಿಂದ ಬರುತಿದ್ದು ಅವರ ವ್ಯವಸ್ಥೆಗೆ ಕ್ಷೇತ್ರದಿಂದ 200 ಕ್ಕೂ ಹೆಚ್ಚು ಪಕ್ಷದ ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್ ಎಸ್‍ಸಿದ್ದನಗೌಡರ ಹೇಳಿದರು.
ಪಟ್ಟಣದ ಮಾಮಾನಿ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಮುಖ ಕಾರ್ಯಕರ್ತರ ಪೂರ್ವಸಭೆಯಲ್ಲಿ ಮಾತನಾಡಿ, ಬೆಳಗಾವಿಯ ಬಿ.ಎಸ್ ಯಡಿಯೂರಪ್ಪ ಮಾರ್ಗದ ಮಾಲಿನಿ ನಗರದಲ್ಲಿ ನಡೆಯುವ ಬಹಿರಂಗ ಸಭೆಗೆ ಜಿಲ್ಲೆಯಿಂದ 5ಲಕ್ಷಕ್ಕೂ ಹೆಚ್ಚು ಜನರ ಆಗಮನವಾಗಲಿದೆ. ದೇಶದ ಪ್ರಧಾನಿಗಳು ಜಿಲ್ಲೆಗೆ ಆಗಮಿಸುತ್ತಿರುವದರಿಂದ ಜಿಲ್ಲೆಯ ಜನತೆ ಅತ್ಯಂತ ಉತ್ಸುಕರಾಗಿದ್ದರು ಬೆಳಗಾವಿಯಲ್ಲಿ ನಡೆಯಲಿರುವ ರೋಡ ಶೋದಲ್ಲಿ ಲಕ್ಷಾಂತರ ಜನತೆ ಮೋದಿಯವರನ್ನು ಸಮೀಪದಿಂದ ನೋಡಿ ಕಣ್ಣತುಂಬಿಕೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ರೇಲ್ವೆ ನಿಲ್ದಾಣ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಮೋದಿಯವರ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಊಟ, ನೀರು ಆಸನದ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಬರುವವರಿಗೆ ಯಾವುದೆ ತೊಂದರೆಯಾಗದಂತೆ ಶ್ರಮವಹಿಸಬೇಕೆಂದರು.
ಮಂಡಲ ಅಧ್ಯಕ್ಷ ಈರಣ್ಣ ಚಂದರಗಿ ಮಾತನಾಡಿ, ಮೋದಿಯವರು ರಾಜ್ಯಕ್ಕೆ ಅನೇ ಬಾರಿ ಆಗಮಿಸಿದ್ದು ಅವರ ಎಲ್ಲ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿವೆ. ನಮ್ಮಜಿಲ್ಲೆಯ ಈ ಕಾರ್ಯಕ್ರಮದ ಯಶಸ್ವಿಗೆ ನಾವೆಲ್ಲರೂ ವಿಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ರತ್ನಾ ಮಾಮನಿ, ವಿರೂಪಾಕ್ಷ ಮಾಮನಿ, ಅಜೀತರಾವ ದೇಸಾಯಿ, ರುದ್ರಣ್ಣ ಚಂದರಗಿ, ನಯನಾ ಬಸ್ಮೆ, ಶಂಕರಗೌಡ ಪಾಟೀಲ, ಮಲ್ಲೇಶ ಸಳೆಭಾವಿ, ಜಗದೀಶ್ ಹನಸ್ಸಿ, ಸಿ.ವಿ.ಸಂಬಯ್ಯನವರಮಠ, ಬಸವರಾಜ ಶಿಗ್ಗಾವಿ, ಕಾಡಪ್ಪ ವೀರಶೆಟ್ಟಿ, ಸುನೀಲ ಮಾಮಾನಿ, ಅರ್ಜುನ ಅಮೋಜಿ, ವೀರೆಶ ಪ್ರಭುನವರ, ಬಿ.ಎಚ್.ಕಾಳೆ, ಗಂಗರೆಡ್ಡಿ ಸೋಮರೆಡ್ಡಿ, ವಾಯ್.ಎಚ್.ರುದ್ರಾಕ್ಷಿ, ಐ.ಪಿ.ಪಾಟೀಲ, ಚಂದ್ರಕಲಾ ಬಾರ್ಕಿ ಇತರರು ಇದ್ದರು.