ಪ್ರಧಾನಿ ಪ್ರಶಂಸಾ ಪತ್ರ ಪಡೆದ ಡಾ. ಮಲ್ಲೆಯವರಿಗೆ ಸಂಸದ ಜಾಧವ್ ಸನ್ಮಾನ

ಕಲಬುರಗಿ,ಆ.1: ಕೋವಿಡ್ ವೇಳೆ ಎರಡು ಲಕ್ಷಕ್ಕೂ ಅಧಿಕ ಜನರಿಗೆ ಲಸಿಕೆ ನೀಡಿದ ಖ್ಯಾತ ವೈದ್ಯ ಡಾ. ಮಲ್ಲಾರಾವ್ ಮಲ್ಲೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ಮತ್ತು ಅಭಿನಂದನಾ ಪತ್ರ ಬರೆದು ಶುಭ ಕೋರಿದ್ದರು. ಆ ಬೆನ್ನಲ್ಲಿಯೇ ಸಂಸದ ಡಾ. ಉಮೇಶ್ ಜಾಧವ್ ಅವರು ಆಸ್ಪತ್ರೆಗೆ ತೆರಳಿ ಡಾ. ಮಲ್ಲಾರಾವ್ ಮಲ್ಲೆ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಹೆಮ್ಮೆಯ ಹತ್ತು ರೂ.ಗಳ ಡಾಕ್ಟರಸಾಬ್ ಎಂತಲೇ ಪ್ರಸಿದ್ಧಿ ಪಡೆದಿರುವ ಡಾ. ಮಲ್ಲಾರಾವ್ ಮಲ್ಲೆ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಕೋವಿಡ್ ಸಂದರ್ಭದಲ್ಲಿ ಎರಡು ಲಕ್ಷಕ್ಕೂ ಹೆಚ್ಚಿಗೆ ಜನರಿಗೆ ಲಸಿಕೆ ನೀಡಿ ಜನ ಸೇವೆ ಮಾಡಿದ್ದರು. ಅದನ್ನು ಸ್ವತ; ಪ್ರಧಾನಿ ನರೇಂದ್ರ ಮೋದಿ ಅವರು ಗುರುತಿಸಿ ಡಾ. ಮಲ್ಲೆ ಅವರಿಗೆ ಮೆಚ್ಚುಗೆ ಮತ್ತು ಅಭಿನಂದನಾ ಪತ್ರ ಬರೆದು ಶುಭ ಕೋರಿದ್ದರು.
ಆ ಹಿನ್ನೆಲೆಯಲ್ಲಿ ಸಂಸದ ಡಾ. ಉಮೇಶ್ ಜಾಧವ್ ಅವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯ ಡಾ. ಮಲ್ಲೆ ಅವರಿಗೆ ಸನ್ಮಾನಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ರೇವಣಸಿದ್ದಪ್ಪ ಬಡಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.