ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ಭೇಟಿ: 4 ದಿನಗಳ ಕಾಲ ಸಫಾರಿ ನಿರ್ಬಂಧ

ಚಾಮರಾಜನಗರ, ಏ.06:- ಏಪ್ರಿಲ್ 9 ರಂದು ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಭೇಟಿ ನೀಡಲಿದ್ದು, ವನ್ಯಜೀವಿ ಸಫಾರಿ ನಿಷÉೀಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ರಮೇಶ್ ಆದೇಶ ಹೊರಡಿಸಿದ್ದಾರೆ.
ಬಿಗಿ ಭದ್ರತೆ, ಪೂರ್ವ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಏ.5 ರಿಂದ 9 ರವರೆಗೆ ವನ್ಯಜೀವಿ ಸಫಾರಿಯನ್ನು ನಿಬರ್ಂಧಿಸಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ರಾಜ್ಯದಲ್ಲೇ ಅತ್ಯಧಿಕ ಹುಲಿಗಳಿರುವ ರಕ್ಷಿತಾರಣ್ಯವಾಗಿದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಸಫಾರಿ ನಡೆಯುತ್ತಿದೆ. ಬಂಡೀಪುರ ವ್ಯಾಪ್ತಿಯಲ್ಲಿ ಬರುವರೆಸಾರ್ಟ್, ಹೋಂ ಸ್ಟೇ, ಲಾಡ್ಜ್‍ಗಳಲ್ಲಿ ಜನರ ವಾಸ್ತವ್ಯ, ತಂಗುವಿಕೆ, ಭೇಟಿಯನ್ನೂ ಈ ಅವಧಿಯಲ್ಲಿ ನಿಷÉೀಧಿಸಲಾಗಿದೆ.
ಪ್ರಧಾನಿ ಮೋದಿ ಮೈಸೂರು ಪ್ರವಾಸದ ವಿವರ: ಮೋದಿ ಅವರು ಏಪ್ರಿಲ್ 8 ಮತ್ತು 9 ರಂದು ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ. ಏ. 8 ರಂದುರಾತ್ರಿ 8:30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಇಲ್ಲಿನ ಬ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿರಾತ್ರಿ ವಾಸ್ತವ್ಯ ಹೂಡುವರು. ಏಪ್ರಿಲ್ 9ರ ಬೆಳಗ್ಗೆ 6:30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬಂಡೀಪುರಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ 9.30ರವರೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬಂಡೀಪುರದಿಂದ ತಮಿಳುನಾಡಿನ ನೀಲಗಿರಿಗೆ ಪ್ರಯಾಣ ಬೆಳೆಸುವರು. ನೀಲಗಿರಿಯಲ್ಲಿನ ಆನೆ ಶಿಬಿರಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ನೀಲಗಿರಿಯಿಂದ ಮೈಸೂರಿನಕೆ ಎಸ್‍ಒಯುನ ತಾತ್ಕಾಲಿಕ ಹೆಲಿಪ್ಯಾಡ್‍ಗೆ ಆಗಮಿಸುವರು. ಮಧ್ಯಾಹ್ನ 12.30ಕ್ಕೆ ಕೆಎಸ್‍ಒಯುನ ಘಟಿಕೋತ್ಸವ ಭವನದಲ್ಲಿ ನಡೆಯುವ ಬಂಡೀಪುರ ಹುಲಿ ಯೋಜನೆಯ 50 ವಷರ್Àದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆ ನಂತರ ಮಂಡಕಳ್ಳಿ ವಿಮಾನ ನಿಲ್ದಾಣದಿಂದದೆಹಲಿಗೆ ವಾಪಸ್‍ಆಗಲಿದ್ದಾರೆ ಎಂದು ತಿಳಿದು ಬಂದಿದೆ.