ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ವೀಕ್ಷಿಸಿದ ಬಿಜೆಪಿ ಮುಖಂಡರು- ಕಾರ್ಯಕರ್ತರು

ದಾವಣಗೆರೆ.ಏ.೨೮: ಪ್ರಧಾನಿ ನರೇಂದ್ರ ಮೋದಿ  ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ, ವರ್ಚುಯಲ್ ಸಭೆಗೆ ದಾವಣಗೆರೆಯ ವಿವಿಧ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ದಾವಣಗೆರೆಯ ಎಸ್. ನಿಜಲಿಂಗಪ್ಪ ಬಡಾವಣೆಯ ರಾಘವೇಂದ್ರ ಹೋಟೆಲ್, ರಾಂ ಅಂಡ್ ಕೋ ವೃತ್ತ, ಕೆಟಿಜೆ ನಗರ, ಯರಗುಂಟೆ, ದೊಡ್ಡಬಾತಿ, ಕುಕ್ಕುವಾಡ ಬಹುತೇಕ ಎಲ್ಲೆಡೆ ವರ್ಚುಯಲ್ ಸಭೆ ನಡೆದವು.ಎಸ್. ನಿಜಲಿಂಗಪ್ಪ ಬಡಾವಣೆಯ ರಾಘವೇಂದ್ರ ಹೋಟೆಲ್ ಬಳಿ ಆಯೋಜಿಸಿದ್ದ ಸಭೆಯಲ್ಲಿ ಸಂಸದ ಡಾ.ಜಿ.ಎಂ. ಸಿದ್ದೇಶ್ವರ, ರಾಜ್ಯ ಬಿಜೆಪಿ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಮಹಾನಗರ ಪಾಲಿಕೆ ಸದಸ್ಯರಾದ ಕೆ. ಪ್ರಸನ್ನ ಕುಮಾರ್, ಆರ್. ಶಿವಾನಂದ್, ಮಾಜಿ ಸದಸ್ಯರಾದ ಎಚ್.ಎನ್. ಶಿವಕುಮಾರ್, ಎಚ್.ಸಿ. ಜಯಮ್ಮ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ  ಶ್ರೀನಿವಾಸ್ ದಾಸಕರಿಯಪ್ಪ, ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಅವರ ಪತ್ನಿ ಲತಾ ನಾಗರಾಜ್, ಪುತ್ರ ಅಭಿಷೇಕ್, ಮಗಳು ರಂಜಿತಾ, ಸುರೇಶ್ ಗಂಡಗಾಳೆ, ಮಂಜುನಾಥ್, , ರವಿ, ಗಂಗಾಧರ್ ಇತರರು ಇದ್ದರು.ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಯರಗುಂಟೆಯಲ್ಲಿ ಬಿಜೆಪಿ ಕರ್ನಾಟಕದ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಬಿಜೆಪಿ ಅಭ್ಯರ್ಥಿ ಬಿ.ಜಿ.ಅಜಯಕುಮಾರ್ ವೀಕ್ಷಿಸಿದರು. ಮಾಜಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ವೈ.ಮಲ್ಲೇಶ್, ಆನಂದರಾವ್ ಶಿಂಧೆ. ಪ್ರಧಾನ ಕಾರ್ಯದರ್ಶಿ ನೀಲಗುಂದ ರಾಜು, ಮಾಜಿ ಮಹಾನಗರ ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ, ಮಾಜಿ ಸದಸ್ಯರಾದ ಶಿವನಗೌಡ ಟಿ.ಪಾಟೀಲ್, ತರಕಾರಿ ಶಿವು ,ಗೋವಿಂದರಾಜ್,ಬಿ. ರಮೇಶ್ ನಾಯ್ಕ, ಕಿಶೋರ್ ಕುಮಾರ್, ಶಂಕರಗೌಡ ಬಿರಾದರ,ಸಂದೀಪ್ ಜೈನ್, ಭಾಗ್ಯ ಪಿಸಾಳೆ ಇತರರು ಇದ್ದರು.