ಪ್ರಧಾನಿ ದೇಶಿಯ ಕೋವಿಡ್ ಲಸಿಕೆ ಮೊದಲುಪಡೆಯಲಿ

ದಾವಣಗೆರೆ.ಜ.೬;ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶೀಯ ಕೋವಿಡ್ ಲಸಿಕೆಯಾದ ಕೋವ್ಯಾಕ್ಸಿನ್ ಲಸಿಕೆಯನ್ನು ಮೊದಲು ಪಡೆಯುವ ಮೂಲಕ ಜನರಲ್ಲಿರುವ ಗೊಂದಲ ನಿವಾರಣೆ ಮಾಡಿ ಧೈರ್ಯ ತುಂಬಬೇಕೆಂದು ಕೆಪಿಸಿಸಿ ವಕ್ತಾರರಾದ ಡಿ.ಬಸವರಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೋವಿಡ್ ತಡೆ ಲಸಿಕೆಗಳನ್ನು ನಮ್ಮ ದೇಶದಲ್ಲಿ ಅಭಿವೃದ್ದಿ ಪಡಿಸಿ ತಯಾರಿಸಿದ ವಿಜ್ಞಾನಗಳ ಹಾಗೂ ತಂತ್ರಜ್ಞರಿಗೆ ಇಡೀ ದೇಶದ ಜನತೆ ಚಿರಋಣಿಯಾಗಿದೆ ಎಂದಿರುವ ಅವರು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಕ ಸಂಸ್ಥೆ ಅನುಮೋದನೆ ನೀಡಿದೆ. ಆದರು ಸಹ ಕೋವಿಡ್ ಲಸಿಕೆ ಪಡೆಯಲು ಜನರಲ್ಲಿ ಇನ್ನು ಗೊಂದಲವಿದೆ. ವಿದೇಶಿಗಳಲ್ಲಿ ಅಲ್ಲಿನ ರಾಷ್ಟಾçಧ್ಯಕ್ಷರು, ಪ್ರಧಾನಿಗಳು ಮೊದಲು ಲಸಿಕೆ ಪಡೆಯುವ ಮೂಲಕ ಜನರಲ್ಲಿ ಧೈರ್ಯ ತುಂಬಿದ್ದಾರೆ. ಅದರಂತೆ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಗೂ ಅವರ ಸಂಪುಟ ಸದಸ್ಯರು ರಾಜ್ಯಗಳಲ್ಲಿನ ಸಿಎಂ , ಸಚಿವರು ವಿಜ್ಞಾನಿಗಳು ವೈದ್ಯರು ಮೊದಲು ಕೋವಿಡ್ ಲಸಿಕೆ ಪಡೆಯಲಿ ಇದರಿಂದ ಜನರಿಗೆ ಲಸಿಕೆ ಬಗ್ಗೆ ಸಂಪೂರ್ಣ ವಿಶ್ವಾಸ ಮೂಡಲಿದೆ.ಭಾರತದಲ್ಲಿ ಕೋವಿಡ್ ಲಸಿಕೆಯನ್ನು ಎಲ್ಲ ಜನರಿಗೂ ಕೇಂದ್ರ –ರಾಜ್ಯ ಸರಕಾರಗಳು ಉಚಿತವಾಗಿ ನೀಡಲಿ ಎಂದು ಆಗ್ರಹಿಸಿರುವ ಅವರು, ಇದಕ್ಕಾಗಿ ಪಿಎಂ ಕೇರ್ಸ್ ಫಂಡ್ , ಕೇಂದ್ರ, ರಾಜ್ಯ ಸರಕಾರಗಳು ಹಣ ಭರಿಸುವ ಮೂಲಕ ಜನರ ಆರೋಗ್ಯ ಕಾಪಾಡಲಿ ಎಂದು ಅವರು ಒತ್ತಾಯಿಸಿದ್ದಾರೆ.