
ನವದೆಹಲಿ,ಫೆ.24- ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪದ ಪ್ರಕರಣದಲ್ಲಿ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರನ್ನು ವಿಮಾನದಿಂದ ಇಳಿಸಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಕೆಲವೇ ಗಂಟೆಗಳ ನಂತರ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.ನಾವು ನಿಮ್ಮನ್ನು ರಕ್ಷಣೆ ಮಾಡುತ್ತಿದ್ದೇವೆ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ. ಸುಪ್ರೀಂ ಜಾಮೀನಿನಿಂದ ಪವನ್ ಖೇರಾ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.ಪವನ್ ಖೇರಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭೀಷೇಕ್ ಮನ್ ಸಿಂಗ್ವಿ ವಾದ ಮಂಡಿಸಿ ಪವನ್ ಖೇರಾ ಪರ ವಾದ ಮಂಡಿಸಿದ್ದರು.” ಮುಂದಿನ ಪ್ರಕರಣ ವಿಚಾರಣೆ ನಡೆಸಲಿದ್ದಾರೆ. ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಪವನ್ ಖೇರಾ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಒಟ್ಟುಗೂಡಿಸುವಂತೆ ಮಾಡಿದ ಮನವಿಗೆ ನ್ಯಾಯಾಲಯ ಸಮ್ಮತಿಸಿದೆ.ಛತ್ತೀಸ್‌ಗಢದ ರಾಯ್‌ಪುರಕ್ಕೆ ವಿಮಾನದಿಂದ ಇಳಿಯುವಂತೆ ಖೇರಾ ಅವರನ್ನು ಕೇಳಿದ ನಂತರ ಸುಮಾರು 50 ಕಾಂಗ್ರೆಸ್ ನಾಯಕರು ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದ ಆವರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಛತ್ತೀಸ್ಘಡದಲ್ಲಿ ನಾಳೆಯಿಂದ ನಡೆಯಲಿರುವ ಮೂರು ದಿನಗಳ ಸಭೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಗಾಗಿ ರಾಯ್‌ಪುರ ತೆರಳು ಹೊರಟ ಸಮಯದಲ್ಲಿ ಬಂಧಿಸಲಾಗಿತ್ತುಬಂಧನದ ಸಮಯದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು”ಇದು ಸುದೀರ್ಘ ಯುದ್ಧವಾಗಿದೆ ಮತ್ತು ನಹೋರಾಡಲು ಸಿದ್ಧ” ಎಂದು ಗುಡುಗಿದ್ದರು ಪ್ರಧಾನ ಮಂತ್ರಿಯ ತಂದೆಯ ಕುರಿತು ಪವನ್ ಖೇರಾ ಅವರು ಹೇಳಿಕೆಗೆ ಕಾಂಗ್ರೆಸ್‌ನ ಉನ್ನತ ಮಟ್ಟದ ಆಶೀರ್ವಾದವಿದೆ,ಮೂಲದ ವ್ಯಕ್ತಿ ಪ್ರಧಾನಿಯಾಗುವುದರ ವಿರುದ್ಧ ಅರ್ಹತೆ ಮತ್ತು ತಿರಸ್ಕಾರದಿಂದ ತುಂಬಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ಭಯದಿಂದ ಬಿಜೆಪಿ ಹೆದರುತ್ತಿದೆ: ಕಾಂಗ್ರೆಸ್
ಬಿಜೆಪಿ ಭಯದಿಂದ ವರ್ತಿಸುತ್ತಿದೆ ಮತ್ತು “ರಾಹುಲ್ ಗಾಂಧಿಯವರ ಯಶಸ್ವಿ ಭಾರತ್ ಜೋಡೋ ಯಾತ್ರೆ” ಯ ಕಾರಣದಿಂದಾಗಿ ಪಕ್ಷದ ಸರ್ವಸದಸ್ಯ ಅಧಿವೇಶನವನ್ನು ತಡೆಯಲು ಬಯಸಿದೆ ಎಂದು ಕಾಂಗ್ರೆಸ್ ಹೇಳಿದೆ.ಕಳೆದ ವಾರ, ಜಾರಿ ನಿರ್ದೇಶನಾಲಯ, ಛತ್ತೀಸ್‌ಗಢದ ಕಾಂಗ್ರೆಸ್ ಶಾಸಕರ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಶೋಧ ನಡೆಸಿತ್ತು .ಈಗ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸುತ್ತಿದೆ ಎಂದು ಹೇಳಿದ್ದಾರೆ.ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯಿಸಿ,“ ದೇಶದ ಪರಿಸ್ಥಿತಿಯು ತುರ್ತು ಪರಿಸ್ಥಿತಿಗಿಂತ ಕೆಟ್ಟದಾಗಿದೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದ್ದಾರೆ.