ಪ್ರಧಾನಿಯಿಂದ ಅನಗತ್ಯ ವಿವಾದ ಗೊಂದಲ ಸೃಷ್ಠಿ: ಮಮತಾ ವಾಗ್ದಾಳಿ

ಕೋಲ್ಕತ್ತಾ,ಮೇ.29-ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಪ್ರತಿ ಭಾರಿ ಬಂದಾಗಲೂ ಒಂದಲ್ಲ ಒಂದು ಗೊಂದಲ, ಅನಗತ್ಯ ವಿವಾದ ಸೃಷ್ಠಿ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇರ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿಯಾಗಿ ಈ ರೀತಿಯ ಕ್ಷುಲ್ಲಕ ರಾಜಕಾರಣ ಮಾಡುವುದು ಅವರ ಹುದ್ದೆಗೆ ಗೌರವ ಘಟನೆ ತಂದುಕೊಡುವುದಿಲ್ಲ. ಬಂಗಾಳಕ್ಕೆ ಭೇಟಿ ನೀಡಿದ ಸಮಯದಲ್ಲೆಲ್ಲಾ ಗೊಂದಲ ಮತ್ತು ಮುಖಾಮುಖಿ ಸೃಷ್ಠಿ ಮಾಡುತ್ತಾರೆ, ಇದರಿಂದ ಅವರಿಗೆ ಏನು ಸಿಗುತ್ತದೋ ಅರ್ಥವಾಗುತ್ತಿಲ್ಲ ಎಂದು ದೂರಿದ್ದಾರೆ.

ನಿನ್ನೆ ಯಾಸ್ ಚಂಡಮಾರುತದ ವೈಮಾಣಿಕ ಪ್ರವಾಸಕ್ಕೆ ಬಂದಾಗ ಏಕ ಮುಖ ಪ್ರವಾಸ ಕೈಗೊಂಡಿದ್ದಾರೆ. ನಿಯಮದಂತೆ ಪರಿಹಾರ ನೀಡಿಲ್ಲ.ವಿನಾ ಕಾರಣ ಸಮಸ್ಯೆ ಸೃಷ್ಟಿ ಮಾಡಿದ್ದಾರೆ ಎಂದು ದೂರಿದ್ದಾರೆ.

ನಿನ್ನೆ ಪ್ರಧಾನಿ ಅವರ ಪ್ರಗತಿ ಪರಿಶೀಲನೆ ಸಭೆಗೆ ರಾಜ್ಯ ಸರ್ಕಾರದ ಪರವಾಗಿ ಮುಖ್ಯಕಾರ್ಯದರ್ಶಿ ಹಾಜರಾಗಿದ್ದಾರೆ. ಈಗಿರುವಾಗ ಅವರನ್ನು ಏಕಾ ಏಕಿ ಕೇಂದ್ರ ಸೇವೆಗೆ ಕರೆಸಿಕೊಳ್ಳುವ ಮೂಲಕ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಟಿಎಂಸಿ ಗೆಲುವು ಸಾಧಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನಗತ್ಯ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಇಂತಹುದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ತಿರುಗೇಟು ನೀಡಿದ್ದಾರೆ.