ಪ್ರಧಾನಿಯಾಗಿ‌ ನರೇಂದ್ರ ಮೋದಿ ಅಧಿಕಾರ ಸ್ವೀಕಾರ:  ಹರಪನಹಳ್ಳಿಯಲ್ಲಿ ಎಲ್ ಇಡಿ ಪರದೆಯಲ್ಲಿ ವಿಕ್ಷಣೆ.

ಸಂಜೆವಾಣಿ ವಾರ್ತೆ, 

ಹರಪನಹಳ್ಳಿ.ಜೂ.೧೦; ನರೇಂದ್ರ ಮೋದಿಯವರು ದೇಶದಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಭಾನುವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಇಲ್ಲಿಯ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ವಿಜಯೋತ್ಸವ ಅಚರಿಸಿದರು.ಇಲ್ಲಿಯ ಪ್ರವಾಸಿ ಮಂದಿರ ವೃತ್ತದ ಶೇಖ್​ಬಾವಿ ಬಳಿ ದೊಡ್ಡದಾದ ಎಲ್​ಇಡಿ ಪರದಿ ಇಟ್ಟು ಸಾರ್ವಜನಿಕವಾಗಿ ಮೋದಿ ಹಾಗೂ ಇತರ ಸಚಿವರ ಪ್ರಮಾಣ ವಚನ ಸಮಾರಂಭ ವೀಕ್ಷಿಸಿದರು.ಕಾರ್ಯಕರ್ತರು ಪಟಾಕಿ ಸಿಡಿಸಿ, ದಾರವಾಡ ಪೇಡ ಹಂಚಿ ಸಂಭ್ರಮಿಸಿದರು. ಬಿಜೆಪಿ ಪಕ್ಷದ ಬಾವುಟ ಕೈಯಲ್ಲಿ ಬೀಸುತ್ತಾ ಭಾರತ ಮಾತಾಕಿ ಜೈ, ಮೋದಿಕಿ ಜೈ ಎಂದು ಘೋಷಣೆ ಕೂಗಿದರು. ಪಿಎಸ್​ಐ ಶಂಭುಲಿಂಗಹಿರೇಮಠ್​ಒಂದು ಡಿಆರ್​ವಾಹನದೊಂದಿಗೆ ಬಂದೋಬಸ್ ಏರ್ಪಡಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಕಲ್ಲಹಳ್ಳಿ ಲಕ್ಷ್ಮಣ, ಮುಖಂಡರಾದ ಆರುಂಡಿ ನಾಗರಾಜ, ಜಿ.ನಂಜನಗೌಡ, ಬಾಗಳಿ ಕೊಟ್ರೇಶಪ್ಪ, ಎಂ.ಪಿ.ನಾಯ್ಕ, ಕಂಚಿಕೇರಿ ಶಾನುಬೋಗರ ಕೆಂಚಪ್ಪ, ಕಣವಿಹಳ್ಳಿ ಮಂಜುನಾಥ, ಮಲ್ಲಿಕಾರ್ಜುನ, ಆರ್​.ಲೋಕೇಶ, ಮುದುಕನವರ್​ಶಂಕರ, ಮಹಿಳಾ ಘಟಕದ ಅಧ್ಯಕ್ಷೆ ಸ್ವಪ್ನ, ಬಾಗಳಿ ಮಂಜುನಾಥ, ಸಣ್ಣಹಾಲಪ್ಪ, ಓಂಕಾರಗೌಡ, ಎಚ್​.ಎ.ವೇಣುಗೇಪಾಲ.ಪುರಸಭಾ ಸದಸ್ಯ ಕಿರಣ್​ಶಾನಬಾಗ್​, ಮೈದುರು ಮಲ್ಲಿಕಾರ್ಜುನ, ಉಪ್ರಾರ ತಿಮ್ಮಣ್ಣ, ವಿನಾಯಕ ಭಜಂತ್ರಿ, ರೇಖಾ, ಜೆಡಿಎಸ್​ತಾಲೂಕು ಅಧ್ಯಕ್ಷ ಶಿರಹಟ್ಟಿ ದಂಡೆಪ್ಪ, ಮಹೇಶ ಪೂಜಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.