ಪ್ರಧಾನಿಗೆ ಮಮತಾ ತಿರುಗೇಟು

ಕೋಲ್ಕತಾ,ಏ.೨- ನಂದಿಗ್ರಾಮ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಲುವುದು ಖಚಿತ ಅವರು ಬೇರೊಂದು ಕ್ಷೇತ್ರ ನೋಡಿಕೊಳ್ಳುವುದು ಉಚಿತ ಎನ್ನುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಮಮತಾಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
೨೦೧೪ರ ಲೋಕಸಭಾ ಚುನಾವಣೆಯಲ್ಲಿ ತಾವು ಕೂಡ ವಾರಣಾಸಿ ಕ್ಷೇತ್ರದ ಬದಲು ಬೇರೊಂದು ಕ್ಷೇತ್ರವನ್ನು ನೋಡಿಕೊಳ್ಳಿ ಎಂದು ಪ್ರಧಾನಿಗೆ ತಿರುಗೇಟು ನೀಡಿದ್ದಾರೆ.
ನೆನ್ನೆ ಪಶ್ಚಿಮಬಂಗಾಳದ ವಿವಿಧ ಕಡೆ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಷಯ ಪ್ರಸ್ತಾಪ ಮಾಡಿದ ಅವರು ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ನೂರಕ್ಕೆ ನೂರು ಸೋಲುವುದು ಖಚಿತ. ಹೀಗಾಗಿ ಸುರಕ್ಷಿತವಾಗಿ ಮತ್ತೊಂದು ಕ್ಷೇತ್ರವನ್ನು ಅವರು ನೋಡಿಕೊಳ್ಳುವುದು ಒಳಿತು ಎಂದು ಸಲಹೆ ಮಾಡಿದ್ದರು
ಈ ಕುರಿತು ಟ್ವೀಟ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು , ಸುಳ್ಳುಗಳ ಮೂಲಕ ಪಶ್ಚಿಮ ಬಂಗಾಳದ ಜನರನ್ನು ವಂಚಿಸಲು ಸಾಧ್ಯವಿಲ್ಲ. ತಾವು ಕೂಡ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಸುರಕ್ಷಿತ ಕ್ಷೇತ್ರವನ್ನು ನೋಡಿಕೊಳ್ಳಿ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಜನರು ದಡ್ಡರಲ್ಲ ಅವರಿಗೆ ಯಾವುದು ಸುಳ್ಳು ಯಾವುದು ಸತ್ಯ ಎನ್ನುವುದು ಗೊತ್ತಿದೆ ಎಂದು ಅವರು ತಿಳಿಸಿದ್ದಾರೆ